×
Ad

ಇಥಿಯೋಪಿಯಾ ಭೂಕುಸಿತ | ಮೃತರ ಸಂಖ್ಯೆ 500ಕ್ಕೆ ಏರಿಕೆ

Update: 2024-07-25 22:07 IST

PC : PTI

ಅಡಿಸ್ ಅಬಾಬ : ಈ ವಾರದ ಆರಂಭದಲ್ಲಿ ಇಥಿಯೋಪಿಯಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 500ಕ್ಕೆ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಏಜೆನ್ಸಿ ಗುರುವಾರ ಹೇಳಿದೆ.

ಭಾರೀ ಮಳೆಯಿಂದಾಗಿ ರವಿವಾರ ರಾತ್ರಿ ದಕ್ಷಿಣ ಇಥಿಯೋಪಿಯಾದ ಗೊಫಾ ಪ್ರಾಂತದಲ್ಲಿ ಭೂಕುಸಿತ ಸಂಭವಿಸಿತ್ತು. ಇಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ತಂಡದ ಮೇಲೆ ಸೋಮವಾರ ಮತ್ತೊಂದು ಗುಡ್ಡ ಕುಸಿದು ಬಿದ್ದಿತ್ತು. ಕಲ್ಲು ಮಣ್ಣಿನ ರಾಶಿಯಡಿ ಗುರುವಾರವೂ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಸಾವನ್ನಪ್ಪಿದವರ ಸಂಖ್ಯೆ 500ನ್ನು ದಾಟಬಹುದು ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News