×
Ad

ಗಾಝಾ: ಇಸ್ರೇಲ್ ದಾಳಿಯಲ್ಲಿ 52 ಮಂದಿ ಸಾವು

Update: 2025-05-22 23:02 IST

ಸಾಂದರ್ಭಿಕ ಚಿತ್ರ | PC : NDTV 

ಗಾಝಾ: ಗಾಝಾ ಪ್ರದೇಶದಾದ್ಯಂತ ಗುರುವಾರ ಬೆಳಗ್ಗಿನಿಂದ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 52 ಮಂದಿ ಮೃತಪಟ್ಟಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ.

ಗಾಝಾ ಪಟ್ಟಿಯ ವಿವಿಧೆಡೆ ಗುರುವಾರ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 52 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವ ಮಾಹಿತಿಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಜಬಾಲಿಯಾ ಮತ್ತು ಬೀಟ್ ಲಾಹಿಯಾದ ಕೆಲವು ಭಾಗಗಳನ್ನು ಒಳಗೊಂಡಂತೆ ಉತ್ತರ ಗಾಝಾ ಪಟ್ಟಿಯ 14 ಪ್ರದೇಶಗಳಿಗೆ ಸ್ಥಳಾಂತರಿಸುವ ಎಚ್ಚರಿಕೆಯನ್ನು ಇಸ್ರೇಲಿ ಸೇನೆ ಗುರುವಾರ ನೀಡಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News