×
Ad

ಹಮಾಸ್ ಶರಣಾದರೆ ಗಾಝಾ ಯುದ್ಧ ನಾಳೆಯೇ ಅಂತ್ಯವಾಗುತ್ತದೆ: ಅಮೆರಿಕ

Update: 2025-09-05 21:03 IST

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ | PC : Reuters 

ವಾಶಿಂಗ್ಟನ್: ಹಮಾಸ್ ಶರಣಾಗಿ, ಉಳಿದಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರೆ ಗಾಝಾದಲ್ಲಿ ಮುಂದುವರಿದಿರುವ ಯುದ್ಧವು `ನಾಳೆಯೇ' ಅಂತ್ಯವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಹೇಳಿದ್ದಾರೆ.

ಈಕ್ವೆಡಾರ್ ರಾಜಧಾನಿ ಕ್ವಿಟೋದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೂಬಿಯೊ `ಮಾನವೀಯ ಸಂಕಟವನ್ನು ನಾವು ಇಷ್ಟಪಡುವುದಿಲ್ಲ. ನಾವು ಗಾಝಾಕ್ಕೆ ಸಾಕಷ್ಟು ನೆರವು ಒದಗಿಸಿದ್ದೇವೆ. ಈಗಲೂ ನೆರವು ಒದಗಿಸಲು ಸಿದ್ಧವಾಗಿದ್ದೇವೆ ಮತ್ತು ಯುದ್ಧ ಅಂತ್ಯಗೊಂಡ ಬಳಿಕವೂ ನೆರವು ಒದಗಿಸುತ್ತೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News