×
Ad

ನೆತನ್ಯಾಹುಗೆ ಕ್ಷಮಾದಾನ ನೀಡಿ: ಇಸ್ರೇಲ್ ಅಧ್ಯಕ್ಷರಿಗೆ ಟ್ರಂಪ್ ಪತ್ರ

Update: 2025-11-12 22:50 IST

Photo: AP

ಜೆರುಸಲೇಂ, ನ.12: ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕ್ಷಮಾದಾನ ನೀಡುವಂತೆ ಆಗ್ರಹಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರ ಬರೆದಿರುವುದಾಗಿ ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್ ಅವರ ಕಚೇರಿ ಬುಧವಾರ ಹೇಳಿದೆ.

` ಇಸ್ರೇಲ್ ನ್ಯಾಯ ವ್ಯವಸ್ಥೆಯ ಸ್ವಾತಂತ್ರ್ಯ ಮತ್ತು ಅದರ ಅವಶ್ಯಕತೆಗಳನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ನನ್ನ ಹೋರಾಟದಲ್ಲಿ ದೀರ್ಘಾವಧಿಯಿಂದ ಜೊತೆಗಿರುವ, `ಬಿಬಿ' (ನೆತನ್ಯಾಹು ಅವರ ಅಡ್ಡಹೆಸರು) ವಿರುದ್ಧದ ಈ ಪ್ರಕರಣವು ರಾಜಕೀಯ ಪ್ರೇರಿತ, ನ್ಯಾಯ ಸಮ್ಮತವಲ್ಲದ ಕಾನೂನು ಕ್ರಮವಾಗಿದೆ ಎಂದು ಭಾವಿಸುವುದಾಗಿ' ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಅಧ್ಯಕ್ಷರ ಕ್ಷಮಾದಾನ ಬಯಸುವವರು ಸ್ಥಾಪಿತ ಕಾರ್ಯವಿಧಾನಗಳಿಗೆ ಅನುಸಾರವಾಗಿ ಔಪಚಾರಿಕ ವಿನಂತಿಯನ್ನು ಸಲ್ಲಿಸಬೇಕು ಎಂದು ಇಸ್ರೇಲ್ ಅಧ್ಯಕ್ಷರ ಕಚೇರಿ ಪ್ರತಿಕ್ರಿಯಿಸಿದೆ. ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News