×
Ad

ಯುರೋಪ್ ಮೇಲೆ ಹಮಾಸ್ ದಾಳಿ ನಡೆಸಬಹುದು : ಇಸ್ರೇಲ್

Update: 2024-01-14 22:37 IST

Photo: NDTV 

ಟೆಲ್ ಅವೀವ್ : ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಯುರೋಪ್‍ಗೆ ಭಯೋತ್ಪಾದಕ ದಾಳಿಯನ್ನು ವಿಸ್ತರಿಸಲು ಹಮಾಸ್ ಯೋಜನೆ ರೂಪಿಸಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಲಭಿಸಿದೆ ಎಂದು ಇಸ್ರೇಲ್ ಭದ್ರತಾ ಅಧಿಕಾರಿಗಳು ರವಿವಾರ ಪ್ರತಿಪಾದಿಸಿದ್ದಾರೆ.

ಹಮಾಸ್ ಪ್ರಪಂಚದಾದ್ಯಂತ ಅಮಾಯಕರ ಮೇಲೆ ದಾಳಿ ನಡೆಸುವ ಸಲುವಾಗಿ ತನ್ನ ಭಯೋತ್ಪಾದಕ ಚಟುವಟಿಕೆಯನ್ನು ವಿಸ್ತರಿಸಲು ಯೋಜನೆ ರೂಪಿಸಿರುವ ಬಗ್ಗೆ ಗಣನೀಯ ಮಾಹಿತಿಯನ್ನು ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್ ಮತ್ತು ಇಸ್ರೇಲ್ ಭದ್ರತಾ ಪಡೆ ಒದಗಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯುರೋಪ್‍ನಲ್ಲಿ ಹಮಾಸ್ ಪರವಾಗಿ ನಾಗರಿಕರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ 7 ಮಂದಿ ಶಂಕಿತ ಆರೋಪಿಗಳನ್ನು ಡೆನ್ಮಾರ್ಕ್ ಮತ್ತು ಜರ್ಮನ್ ಅಧಿಕಾರಿಗಳು ಬಂಧಿಸಿರುವುದು ಇದಕ್ಕೆ ಪುರಾವೆಯಾಗಿದೆ. ಹಮಾಸ್‍ನ ಹಿಂಸಾತ್ಮಕ ಚಟುವಟಿಕೆಗಳ, ಲೆಬನಾನ್‍ನಲ್ಲಿ ನಡೆದ ಹಿಂಸಾಕೃತ್ಯಗಳಲ್ಲಿ ಹಮಾಸ್ ಕಮಾಂಡರ್ ಗಳ ಪಾತ್ರ, ಸ್ವೀಡನ್‍ನಲ್ಲಿ ಇಸ್ರೇಲಿ ರಾಯಭಾರಿ ಕಚೇರಿಯ ಮೇಲೆ ದಾಳಿಗೆ ರೂಪಿಸಿರುವ ಸಂಚಿನ ಬಗ್ಗೆ ವಿಸ್ತ್ರತ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News