×
Ad

ಲಿಬಿಯಾ | ಬೆಂಗಾಝಿಯಿಂದ 18 ಮಂದಿ ಭಾರತೀಯರನ್ನು ಭಾರತಕ್ಕೆ ವಾಪಸು ಕಳಿಸಿದ ಭಾರತೀಯ ರಾಜತಾಂತ್ರಿಕ ಕಚೇರಿ

Update: 2025-02-04 22:06 IST

Photo Credit: X/@MEAIndia

ಹೊಸದಿಲ್ಲಿ: ಹಲವಾರು ವಾರಗಳ ಕಾಲ ಬೆಂಗಾಝಿಯಲ್ಲಿ ಸಿಲುಕಿಕೊಂಡಿದ್ದ 18 ಮಂದಿ ಭಾರತೀಯರನ್ನು ಭಾರತಕ್ಕೆ ವಾಪಸು ಕಳಿಸುವ ವ್ಯವಸ್ಥೆಯನ್ನು ಲಿಬಿಯಾದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿ ಮಾಡಿದೆ ಎಂದು ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ನಕಲಿ ಉದ್ಯೋಗ ಏಜೆಂಟ್ ಗಳು ಭಾರತೀಯರಿಗೆ ಆಮಿಷವೊಡ್ಡಿ ಲಿಬಿಯಾ ನಗರಕ್ಕೆ ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

“ಲಿಬಿಯಾದ ಬೆಂಗಾಝಿಯಿಂದ 18 ಮಂದಿ ಭಾರತೀಯರನ್ನು ಭಾರತಕ್ಕೆ ವಾಪಸು ಕಳಿಸುವ ವ್ಯವಸ್ಥೆಯನ್ನು ಲಿಬಿಯಾದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿ ಮಾಡಿದೆ. ಅವರೆಲ್ಲ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಅವರು ಲಿಬಿಯಾದಲ್ಲಿ ಕೆಲಸ ಮಾಡಲು ತೆರಳಿದ್ದರು. ಹಲವಾರು ವಾರಗಳಿಂದ ಅಲ್ಲಿ ಸಿಲುಕಿಕೊಂಡಿದ್ದರು. ಭಾರತೀಯ ರಾಜತಾಂತ್ರಿಕ ಕಚೇರಿಯು ಸ್ಥಳೀಯ ಪ್ರಾಧಿಕಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡಿತು ಹಾಗೂ ಭಾರತೀಯ ಕೆಲಸಗಾರರಿಗೆ ಅಗತ್ಯವಿರುವ ಮಾನ್ಯತೆ ಹಾಗೂ ಪ್ರಯಾಣ ದಾಖಲೆಗಳೊಂದಿಗೆ ನೆರವು ನೀಡಿತು” ಎಂದು ಅವರು ತಿಳಿಸಿದ್ದಾರೆ.

ಭಾರತೀಯ ರಾಜತಾಂತ್ರಿಕ ಕಚೇರಿಯು ಭಾರತೀಯರೊಂದಿಗೆ ಸಂಪರ್ಕದಲ್ಲಿದೆ ಎಂದೂ ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ನೀಡಿದ ನೆರವು ಹಾಗೂ ಸಹಕಾರಕ್ಕಾಗಿ ಲಿಬಿಯಾ ಪ್ರಾಧಿಕಾರಗಳಿಗೆ ಜೈಸ್ವಾಲ್ ಧನ್ಯವಾದ ಸಲ್ಲಿಸಿದ್ದಾರೆ.

ಭಾರತ ಸರಕಾರವು ವಿದೇಶಗಳಲ್ಲಿನ ಎಲ್ಲ ಭಾರತೀಯರ ಕಲ್ಯಾಣ ಹಾಗೂ ಸುರಕ್ಷತೆಗೆ ಕಟಿಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News