×
Ad

ಪಾಸ್‍ಪೋರ್ಟ್ ಜಪ್ತಿ: ಕ್ಯಾಮರೂನ್‌ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಭಾರತೀಯ ಕುಟುಂಬ

Update: 2025-11-20 20:47 IST

Screengrab : X \ @SachinGuptaUP


ಯೌಂಡೆ, ನ.20: ಮಧ್ಯ ಆಫ್ರಿಕಾದ ಕ್ಯಾಮರೂನ್‌ ನಲ್ಲಿ ಆಗ್ರಾ ಮೂಲದ ವ್ಯಕ್ತಿ, ಅವರ ಪತ್ನಿ ಮತ್ತು ಒಂದೂವರೆ ವರ್ಷದ ಮಗು ಪಾಸ್‍ಪೋರ್ಟ್ ಮುಟ್ಟುಗೋಲು, ಆರ್ಥಿಕ ಸಂಕಷ್ಟದಿಂದಾಗಿ ದೀರ್ಘಕಾಲದಿಂದ ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ.

2012ರಿಂದ ಕ್ಯಾಮರೂನ್‌ ನ ಡೌಲಾದಲ್ಲಿ ಟೂರ್ ಮತ್ತು ಟ್ರಾವೆಲ್ ಕಂಪೆನಿಯ ಉದ್ಯೋಗಿಯಾಗಿರುವ ಧೀರಜ್ ಜೈನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಲು ನೆರವಾಗುವಂತೆ ಭಾರತ ಸರಕಾರವನ್ನು ಕೋರಿದ್ದಾರೆ. ತನ್ನ ಉದ್ಯೋಗದ ಒಪ್ಪಂದದ ಅವಧಿ ಮುಗಿದಿದ್ದರೂ ದೇಶವನ್ನು ತೊರೆಯಲು ಅನುಮತಿಸುತ್ತಿಲ್ಲ. ಕಂಪೆನಿಗೆ ಸಂಬಂಧಿಸಿದವರು ಪಾಸ್‍ಪೋರ್ಟ್ ಅನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಯಾಣದ ದಾಖಲೆ ಪಡೆಯಲು, ಮಗುವಿಗೆ ಅಗತ್ಯವಿರುವ ಆಹಾರ ಖರೀದಿಸಲೂ ಆರ್ಥಿಕ ಸಂಕಷ್ಟ ಎದುರಾಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

2024ರ ಸೆಪ್ಟಂಬರ್ ನಲ್ಲಿ ಕಂಪೆನಿಯ 19 ದಶಲಕ್ಷ ಸಿಎಫ್‍ಎ ಫ್ರಾಂಕ್ಸ್( ಸುಮಾರು 30 ಲಕ್ಷ ರೂ.) ಹಣ ದರೋಡೆಯಾಗಿದ್ದು ಇದಕ್ಕೆ ವಿನಾಕಾರಣ ತನ್ನನ್ನು ದೂಷಿಸಿ ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಭಾರತೀಯರಾದ ಚಂದ್ರಪ್ರಕಾಶ್ ಮತ್ತು ಮನೀಷ್ ಥಾಕೂರ್ ಸ್ಥಳೀಯ ಪೊಲೀಸರೊಂದಿಗೆ ಶಾಮೀಲಾಗಿ ನಿರಂತರ ಕಿರುಕುಳ ನೀಡುತ್ತಿದ್ದು ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಲು ನೆರವಾಗಬೇಕೆಂದು ಜೈನ್ ಮತ್ತು ಅವರ ಪತ್ನಿ ಭಾರತ ಸರಕಾರವನ್ನು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News