ಪರಮಾಣು ಮಾತುಕತೆ ಮರು ಆರಂಭಿಸುವ ಸುಳಿವು ನೀಡಿದ ಇರಾನ್: ವರದಿ
Update: 2025-06-16 22:11 IST
ಅಯತೊಲ್ಲಾ ಅಲಿ ಖಮೇನಿನ್| PC : X
ವಾಷಿಂಗ್ಟನ್: ಇಸ್ರೇಲ್ ಜೊತೆಗಿನ ಉದ್ವಿಗ್ನತೆಯನ್ನು ಕೊನೆಗೊಳಿಸಲು ಇರಾನ್ ತುರ್ತಾಗಿ ಬಯಸುತ್ತಿದ್ದು ತನ್ನ ಪರಮಾಣು ಕಾರ್ಯಕ್ರಮಗಳ ಕುರಿತ ಮಾತುಕತೆಯನ್ನು ಪುನರಾರಂಭಿಸಲು ಬಯಸಿದೆ. ಈ ಕುರಿತ ಸಂದೇಶಗಳನ್ನು ಇಸ್ರೇಲ್ ಮತ್ತು ಅಮೆರಿಕಕ್ಕೆ ಅರಬ್ ಮಧ್ಯಸ್ಥಿಕೆದಾರರ ಮೂಲಕ ರವಾನಿಸಿದೆ ಎಂದು ಮಧ್ಯಪ್ರಾಚ್ಯ ಮತ್ತು ಯುರೋಪಿಯನ್ ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಈ ಮಧ್ಯೆ, ಇರಾನ್ ನ ನಟಾಂಜ್ ಯುರೇನಿಯಂ ಪುಷ್ಟೀಕರಣ ಸೌಲಭ್ಯದಲ್ಲಿ ವಿಕಿರಣ ಮತ್ತು ರಾಸಾಯನಿಕ ಮಾಲಿನ್ಯದ ಸಾಧ್ಯತೆಯಿದೆ. ಸ್ಥಾವರದ ಹೊರಗೆ ವಿಕಿರಣ ಮಟ್ಟವು ಸಾಮಾನ್ಯ ಮಟ್ಟದಲ್ಲಿದೆ ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ)ಯ ಮುಖ್ಯಸ್ಥ ರಫೇಲ್ ಗ್ರಾಸಿ ಸೋಮವಾರ ಹೇಳಿದ್ದಾರೆ.