ಕದನ ವಿರಾಮ ಉಲ್ಲಂಘಿಸಿದರೆ ಪ್ರತಿಕ್ರಮ: ಇಸ್ರೇಲ್ ಗೆ ಇರಾನ್ ಎಚ್ಚರಿಕೆ
Update: 2025-06-29 22:15 IST
ಟೆಹ್ರಾನ್: ಅಮೆರಿಕ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ನೊಂದಿಗೆ ಏರ್ಪಟ್ಟಿರುವ ಕದನ ವಿರಾಮದ ಬಾಳಿಕೆ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಇರಾನ್ , ಒಂದು ವೇಳೆ ಹಗೆತನದ ಕೃತ್ಯ ಮುಂದುವರಿದರೆ ಪ್ರತಿದಾಳಿಗೆ ಸನ್ನದ್ಧವಾಗಿರುವುದಾಗಿ ಎಚ್ಚರಿಕೆ ನೀಡಿದೆ.
ನಮ್ಮ ಶತ್ರು(ಇಸ್ರೇಲ್) ಕದನ ವಿರಾಮವನ್ನು ಪಾಲಿಸುವ ಬಗ್ಗೆ ನಮಗೆ ಸಂದೇಹವಿದೆ. ಒಂದು ವೇಳೆ ಅವರು ಉಲ್ಲಂಘಿಸಿ ದಾಳಿ ಆರಂಭಿಸಿದರೆ ನಾವು ತೀವ್ರ ರೀತಿಯಲ್ಲಿ ಪ್ರತಿದಾಳಿಗೆ ಸಿದ್ಧವಾಗಿದ್ದೇವೆ' ಎಂದು ಇರಾನಿನ ಸಶಸ್ತ್ರ ಪಡೆಯ ಮುಖ್ಯಸ್ಥರನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.