×
Ad

ಒಮಾನ್ ನಲ್ಲಿ ಇಳಿದ ಇರಾನ್ ಸರ್ಕಾರದ ವಿಮಾನಗಳು: Flight-tracking data ವರದಿ

Update: 2025-06-18 22:32 IST

PC : X 

ಟೆಹರಾನ್: ಇರಾನ್ ಸರ್ಕಾರದಲ್ಲಿ ನೋಂದಾಯಿಸಲಾದ ಎರಡು ವಿಮಾನಗಳು ಒಮಾನ್ ರಾಜಧಾನಿಯಲ್ಲಿ ಇಳಿದಿವೆ ಎಂದು Flight-tracking data ನ್ಯಾವಿಗೇಷನ್ ಡೇಟಾವು ತೋರಿಸಿದೆ ಎಂದು Aljazeera ವರದಿ ಮಾಡಿದೆ.

ಇರಾನ್‌ನ ಖಾಸಗಿ ಒಡೆತನದ ಮೆರಾಜ್ ಏರ್‌ಲೈನ್ಸ್‌ ನಲ್ಲಿ ನೋಂದಾಯಿಸಲಾದ ಮೂರನೇ ವಿಮಾನವು ಮಸ್ಕತ್‌ನಲ್ಲಿ ಇಳಿದಿದೆ ಎಂದು Flight-tracking data ಬಹಿರಂಗಪಡಿಸಿದೆ.

ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಮಾತುಕತೆಗಳಲ್ಲಿ ಒಮಾನ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿತ್ತು. ಒಮಾನ್ ಗೆ ಯಾವುದೇ ಮಾಹಿತಿ ನೀಡದೆ ಇರಾನ್ ನ ವಿಮಾನಗಳು ಮಸ್ಕತ್ ನಲ್ಲಿ ಲ್ಯಾಂಡ್ ಆಗಿರುವುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಇರಾನ್ ಸರ್ಕಾರದಿಂದ ಯಾವುದೇ ಅಧಿಕೃತ ಪ್ರವಾಸದ ಮಾಹಿತಿ ಬಿಡುಗಡೆಯಾಗಿಲ್ಲ. ಆದರೂ ಇರಾನ್ ವಿಮಾನಗಳು ಒಮಾನ್ ನಲ್ಲಿ ಇಳಿದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಯುದ್ಧ ಪ್ರಾರಂಭವಾದ ಮೇಲೆ ಅಮೆರಿಕದ ಜೊತೆ ಯಾವುದೇ ಪರಮಾಣು ಒಪ್ಪಂದದ ಮಾತುಕತೆ ಇಲ್ಲ ಎಂದು ಇರಾನ್ ಈಗಾಗಲೇ ಸ್ಪಷ್ಟಪಡಿಸಿದೆ.

ಇಸ್ರೇಲ್ ಮತ್ತು ಇರಾನ್ ನ ನಡುವೆ ನಡೆಯುತ್ತಿರುವ ಯುದ್ಧ, ಅದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಸ್ತಕ್ಷೇಪವು ಈ ಬೆಳವಣಿಗೆಯ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News