×
Ad

ಒತ್ತೆಯಾಳುಗಳ ಬಿಡುಗಡೆಗಾಗಿ ಗಾಝಾದಲ್ಲಿ ಎರಡು ತಿಂಗಳು ಕದನ ವಿರಾಮ ಪ್ರಸ್ತಾವನೆ ಮುಂದಿಟ್ಟ ಇಸ್ರೇಲ್‌: ವರದಿ

Update: 2024-01-23 11:29 IST

Photo: PTI

ಟೆಲ್‌ ಅವೀವ್‌ : ಗಾಝಾದಲ್ಲಿ ಹಮಾಸ್‌ ಒತ್ತೆಯಾಳಾಗಿರಿಸಿರುವ ಇಸ್ರೇಲ್‌ನ ಉಳಿದ ಜನರನ್ನು ಬಿಡುಗಡೆಗೊಳಿಸುವುದನ್ನೂ ಒಳಗೊಂಡಂತೆ ಬಹು-ಹಂತದ ಒಪ್ಪಂದದ ಭಾಗವಾಗಿ ಗಾಝಾ ಮೇಲಿನ ದಾಳಿಗೆ ಎರಡು ತಿಂಗಳವರೆಗೆ ವಿರಾಮ ಒದಗಿಸುವ ಪ್ರಸ್ತಾವನೆಯನ್ನು ಖತರ್‌ ಮತ್ತು ಈಜಿಪ್ಟಿನ ಸಂಧಾನಕಾರರ ಮೂಲಕ ಹಮಾಸ್‌ನ ಮುಂದೆ ಇಸ್ರೇಲ್‌ ಇರಿಸಿದೆ ಎಂದು ವರದಿಯಾಗಿದೆ.

ಆದರೆ ಈ ಬೆಳವಣಿಗೆ ಕುರಿತಂತೆ ಇಸ್ರೇಲ್‌, ಖತರ್‌ ಅಥವಾ ಈಜಿಪ್ಟ್‌ ದೃಢಪಡಿಸಿಲ್ಲ. ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಅವರ ಸಲಹೆಗಾರ ಬ್ರೆಟ್ಸ್‌ ಮೆಕ್‌ಗರ್ಕ್‌ ಅವರು ರವಿವಾರ ಈಜಿಪ್ಟಿಗೆ ತೆರಳಿ ನಂತರ ಖತರ್‌ ಗೆ ಆಗಮಿಸುತ್ತಿರುವ ನಡುವೆ ಶಾಂತಿ ಮಾತುಕತೆಯಲ್ಲಿನ ಪ್ರಗತಿ ಕುರಿತು ವರದಿಗಳು ಬಂದಿವೆ.

ಇಸ್ರೇಲ್‌ನ ಕ್ಯಾಬಿನೆಟ್‌ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ವರದಿಗಳು ಹೇಳಿವೆ. ಹಮಾಸ್‌ ಹಿಂದೆ ತಿರಸ್ಕರಿಸಿದ್ದ ವಿಚಾರಗಳನ್ನು ಬಿಟ್ಟು ಬೇರೆ ವಿಚಾರಗಳು ಈ ಪ್ರಸ್ತಾವನೆಗಳಲ್ಲಿವೆ ಎನ್ನಲಾಗಿದೆ. ಗಾಝಾದಲ್ಲಿ ಹಮಾಸ್‌ ಒತ್ತೆಯಾಳಾಗಿ ಇನ್ನೂ 130 ಮಂದಿ ಇಸ್ರೇಲಿಗರು ಇದ್ದಾರೆಂದು ತಿಳಿದು ಬಂದಿದೆ.

ಗಾಝಾ ಮೇಲಿನ ದಾಳಿ ವೇಳೆ ಆಸ್ಪತ್ರೆಗಳು, ವೈದ್ಯಕೀಯ ಸಿಬ್ಬಂದಿ ಮತ್ತು ರೋಗಿಗಳ ರಕ್ಷಣೆಗೆ ಒತ್ತು ನೀಡಬೇಕು ಎಂದು ಇಸ್ರೇಲಿಗೆ ಅಮೆರಿಕಾ ಸೂಚಿಸಿದೆ. ಗಾಝಾದ ಖಾನ್‌ ಯೂನಿಸ್‌ನಲ್ಲಿ ಇಸ್ರೇಲಿ ಪಡೆಗಳು ಒಂದು ಆಸ್ಪತ್ರೆ ಮೇಲೆ ದಾಳಿ ನಡೆಸಿ ಇನ್ನೊಂದನ್ನು ವಶಪಡಿಸಿಕೊಂಡ ನಂತರ ಅಮೆರಿಕಾದ ಸಲಹೆ ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News