×
Ad

ಹಮಾಸ್‌ನ ನೂತನ ನಾಯಕರಾಗಿ ಖಾಲಿದ್ ಮಾಶಲ್?

Update: 2024-10-19 21:49 IST

ಖಾಲಿದ್ ಮಾಶಲ್ | PC : PTI 

ಬೈರೂತ್ :ಯಹ್ಯಾ ಸಿನ್ವರ್ ಅವರ ಹತ್ಯೆಯ ಬಳಿಕ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್‌ನ ರಾಜಕೀಯ ವಿಭಾಗದ ವರಿಷ್ಠ ಸ್ಥಾನವನ್ನು ಖಾಲಿದ್ ಮಾಶಲ್ ಅವರು ವಹಿಸಿಕೊಂಡಿದ್ದಾರೆಂದು ಲೆಬನಾನ್‌ನ ಎಲ್‌ಬಿಸಿಐ ಸುದ್ದಿಜಾಲತಾಣ ಶನಿವಾರ ವರದಿ ಮಾಡಿದೆ.

ಖಾಲಿದ್ ಮಾಶಲ್ ಈವರೆಗೆ ಹಮಾಸ್‌ನ ವಿದೇಶಾಂಗ ವಿಭಾಗದ ವರಿಷ್ಠರಾಗಿ ಕಾರ್ಯನಿರ್ವಹಿಸುತ್ತಿದ್ದರು. ಯಹ್ಯಾ ಸಿನ್ವರ್ ಅವರನ್ನು ಇಸ್ರೇಲಿ ಪಡೆಗಳು ಹತ್ಯೆಗೈದಿರುವ ಬಗ್ಗೆ ಹಮಾಸ್ ನಾಯಕತ್ವವು ಟಿರ್ಕಿ, ಖತರ್ ಹಾಗೂ ಈಜಿಪ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಆದರೆ ಸಿನ್ವರ್ ಸಾವಿನ ಆನಂತರ ಕೈದಿಗಳ ವಿನಿಮಯ ಹಾಗೂ ಯುದ್ಧವನ್ನು ಅಂತ್ಯಗೊಳಿಸುವುದರ ಕುರಿತ ಮಾತುಕತೆಯು ಇನ್ನಷ್ಟು ಜಟಲಗೊಂಡಿದೆಯೆಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News