×
Ad

ಸಿನ್ವರ್ ಮೃತ್ಯುವಿನ ನಂತರವೂ ‘ಪ್ರತಿರೋಧ’ ಪಡೆಗಳ ಹೋರಾಟ ನಿಲ್ಲದು : ಖಾಮಿನೈ ಪ್ರತಿಜ್ಞೆ

Update: 2024-10-19 21:58 IST

ಅಯತುಲ್ಲಾ ಅಲಿ ಖಾಮಿನೈ | PC : NDTV 

ಟೆಹರಾನ್: ಹಮಾಸ್ ನಾಯಕ ಯಹ್ಯಾ ಸಿನ್ವರ್ ಸಾವನ್ನಪ್ಪಿರುವುದನ್ನು ಇಸ್ರೇಲ್ ಪ್ರಕಟಿಸಿದ ಎರಡು ದಿನಗಳ ಬಳಿಕ ಇರಾನ್ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಅವರು ಅಗಲಿದ ಫೆಲೆಸ್ತೀನ್ ಮುಖಂಡನಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ ಹಾಗೂ ಇಸ್ರೇಲ್ ವಿರುದ್ಧ ಹೋರಾಡುತ್ತಿರು ಪ್ರತಿರೋಧ ಪಡೆಗಳಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವ ಶಪಥಗೈದಿದ್ದಾರೆ.

ಈ ಹಿಂದಿನಂತೆ, ಪ್ರಮುಖ ನಾಯಕರನ್ನು ಕಳೆದುಕೊಂಡರೂ ಇಸ್ರೇಲ್ ವಿರುದ್ಧದ ಪ್ರತಿರೋಧ ಹೋರಾಟದ ಕೆಚ್ಚನ್ನು ಹತ್ತಿಕ್ಕಕಲು ಸಾಧ್ಯವಾಗಿರಲಿಲ್ಲ. ಸಿನ್ವರ್ ಅವರ ಬಲಿದಾನದೊಂದಿಗೆ ಈ ಹೋರಾಟದಲ್ಲಿ ಕಿಂಚಿತ್ತೂ ನಿಲುಗಡೆಯಾಗದು ಎಂದು ಖಾಮಿನೈ ಅವರು ಶನಿವಾರ ಬೆಳಗ್ಗೆ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ತನ್ನಿಂದ ಆರ್ಥಿಕ ಹಾಗೂ ಸೇನಾ ನೆರವನ್ನು ಪಡೆಯುತ್ತಿರುವ ಮಧ್ಯಪಾಚ್ಯದ ಹೋರಾಟಗಾರರ ಗುಂಪುಗಳು ಹಾಗೂ ಸಂಘಟನೆಗಳನ್ನು ಇರಾನ್ ಆಡಳಿತವು ಪ್ರತಿರೋಧ ರಂಗ (ರೆಸಿಸ್ಟಾನ್ಸ್ ಫ್ರಂಟ್) ಎಂದು ಕರೆಯುತ್ತಿದೆ. ಲೆಬನಾನ್‌ನಲ್ಲಿ ಹಿಝ್ಬುಲ್ಲಾ, ಗಾಝಾದಲ್ಲಿ ಹಮಾಸ್, ಯೆಮೆನ್‌ನಲ್ಲಿ ಹೌತಿಗಳು ಮತ್ತು ಇರಾಕ್‌ನಲ್ಲಿರುವ ಶಿಯಾ ಗುಂಪುಗಳನ್ನು ಪ್ರತಿರೋಧ ಗುಂಪು ಒಳಗೊಂಡಿದೆ.

‘‘ಯಹ್ಯಾ ಸಿನ್ವರ್ ಅವರ ಮೃತ್ಯು ಇಸ್ರೇಲ್ ವಿರೋಧಿ ಹೋರಾಟಗಾರ ಗುಂಪುಗಳಿಗೆ ಅಪಾರ ವೇದನೆಯನ್ನುಂಟುಮಾಡಿದೆ. ಆದರೆ ಇಸ್ರೇಲ್ ವಿರುದ್ಧದ ಹೋರಾಟವು ನಿಲ್ಲದು ಎಂದು ಖಾಮಿನೈ ಅವರು ಹೇಳಿದ್ದಾರೆ. ಶೇಖ್ ಅಹ್ಮದ್ ಯಾಸಿನ್, ಫಾತಿ ಶಖಾಕಿ, ರಾಂತಿಸಿ ಹಾಗೂ ಇಸ್ಮಾಯೀಲ್ ಹಾನಿಯೇಹ್ ಅವರಂತಹ ಮಹಾನ್ ನಾಯಕರು ಹುತಾತ್ಮರಾದ ಆನಂತರವೂ ಪ್ರತಿರೋಧ ರಂಗದ ಮುನ್ನಡೆಯು ನಿಂತಿಲ್ಲ. ಯಹ್ಯಾ ಸಿನ್ವರ್ ಅವರ ಬಲಿದಾನದ ಆನಂತರವೂ ಈ ಹೋರಾಟವು ಕಿಂಚಿತ್ತೂ ನಿಲ್ಲದು. ಸಿನ್ವರ್ ಅವರ ಮೃತ್ಯು ಇಸ್ರೇಲ್ ವಿರೋಧಿ ಗುಂಪುಗಳಿಗೆ ನೋವಿನ ಸಂಗತಿಯಾಗಿದೆ. ಆದರೆ ಆ ದೇಶದ ವಿರುದ್ಧ ಹೋರಾಡುವ ಅವರ ಪ್ರಯತ್ನಗಳು ನಿಲ್ಲದು”, ಎಂದು ಖಾಮಿನೈ ಅವರು ಹೇಳಿದ್ದಾರೆ.

“ಶೇಖ್ ಅಹ್ಮದ್ ಯಾಸಿನನ್, ಫಾತಿ ಶಖಾಕಿ, ರಾಂತಿಸಿ ಹಾಗೂ ಇಸ್ಮಾಯಿ ಹಾನಿಯೇಹ್‌ರಂತಹ ಮಹಾನ್ ನಾಯಕರು ಹುತಾತ್ಮರಾದ ಆನಂತರವೂ ಪ್ರತಿರೋಧರಂಗದ ಮುನ್ನಡೆಯು ನಿಂತಿಲ್ಲ. ಅಲ್ಲದೆ ಯಹ್ಯಾ ಸಿನ್ವರ್ ಅವರ ಬಲಿದಾನದಿಂದಲೂ ಈ ಹೋರಾಟವು ಕಿಂಚಿತ್ತೂ ನಿಲ್ಲದು. ದೇವರು ಇಚ್ಛಿಸಿದಲ್ಲಿ ಹಮಾಸ್ ಜೀವಂತವಾಗಿರುವುದು”, ಎಂದು ಇರಾನ್‌ನ ಸರ್ವೋಚ್ಚ ನಾಯಕರಾದ ಖಾಮಿನೈ ಎಂದು ಇರಾನ್‌ನ ಸರ್ವೋಚ್ಚ ನಾಯಕರಾದ ಖಾಮಿನೈ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News