×
Ad

ನಸ್ರುಲ್ಲಾ ಬಗ್ಗೆ ಮಾಹಿತಿ ನೀಡಿದ್ದು ಇರಾನ್‍ನ ಮಾಹಿತಿದಾರ : ವರದಿ

Update: 2024-09-29 22:30 IST

PC : PTI

ಟೆಲ್ ಅವೀವ್ : ಇರಾನ್‍ನ ಮಾಹಿತಿದಾರ ನೀಡಿದ ನಿರ್ಣಾಯಕ ಗುಪ್ತಚರ ಮಾಹಿತಿಯು ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾರ ಹತ್ಯೆಗೆ ಪೂರಕ ವೇದಿಕೆ ಒದಗಿಸಿದೆ ಎಂದು ವರದಿಯಾಗಿದೆ.

ನಸ್ರುಲ್ಲಾ ಇದ್ದ ಬಂಕರ್‍ ಗೆ ಶುಕ್ರವಾರ ರಾತ್ರಿ ಇಸ್ರೇಲ್ ಪಡೆ ಬಾಂಬ್‍ದಾಳಿ ನಡೆಸಿತ್ತು. ದಾಳಿಗೆ ಕೆಲವೇ ಗಂಟೆಗಳ ಮೊದಲು ಇರಾನ್‍ನ ಮಾಹಿತಿದಾರ, ಬೈರುತ್‍ನ ದಕ್ಷಿಣದ ಉಪನಗರ ದಹಿಯೆಹ್‍ನಲ್ಲಿ ಬಿಗಿ ಭದ್ರತೆಯ ಭೂಗತ ಪ್ರಧಾನ ಕಚೇರಿಯಲ್ಲಿ ನಸ್ರುಲ್ಲಾ ಇರುವ ಬಗ್ಗೆ ಇಸ್ರೇಲ್ ಪಡೆಗೆ ಮಾಹಿತಿ ರವಾನಿಸಿದ್ದ ಎಂದು ಲೆಬನಾನ್ ಭದ್ರತಾ ಪಡೆಗಳ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ತಕ್ಷಣ ಇಸ್ರೇಲ್ ಬಂಕರ್ ಸ್ಫೋಟಿಸುವ ಬಾಂಬ್‍ಗಳಿಂದ ಸಜ್ಜುಗೊಂಡಿರುವ ಎಫ್-35 ಯುದ್ಧವಿಮಾನಗಳನ್ನು ನಿಯೋಜಿಸಿತು. ಹಿಜ್ಬುಲ್ಲಾ ಪ್ರಧಾನ ಕಚೇರಿಯಲ್ಲಿ ನಿಗದಿಗೊಳಿಸಿದ್ದ ತುರ್ತು ಸಭೆಗೆ ನಸ್ರುಲ್ಲಾ ಆಗಮಿಸಿದ ಮಾಹಿತಿ ದೊರೆತೊಡನೆ ಕಾರ್ಯಾಚರಣೆಗೆ ಆದೇಶಿಸಲಾಗಿದೆ.

6 ಟನ್‍ಗಳ ಎರಡು ಬಾಂಬ್‍ಗಳನ್ನು ಇಸ್ರೇಲ್ ಜೆಟ್‍ಗಳು ಹಾಕಿದ್ದು ಸುಮಾರು 30 ಮೀಟರ್ ಆಳದ ಹೊಂಡ ನಿರ್ಮಾಣಗೊಂಡಿತ್ತು ಮತ್ತು ಸಮೀಪದ ಎರಡು ಕಟ್ಟಡಗಳು ನಾಶಗೊಂಡಿವೆ ಎಂದು ವರದಿ ಹೇಳಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News