×
Ad

ಒತ್ತೆಯಾಳುಗಳಿಗೆ ನೆರವಾಗುವಂತೆ ರೆಡ್‍ಕ್ರಾಸ್‍ ಗೆ ನೆತನ್ಯಾಹು ಮನವಿ

Update: 2025-08-04 22:56 IST

 ಬೆಂಜಮಿನ್ ನೆತನ್ಯಾಹು |  NDTV  

ಜೆರುಸಲೇಂ, ಆ.4: ಗಾಝಾದಲ್ಲಿ ಇರುವ ಒತ್ತೆಯಾಳುಗಳಿಗೆ ನೆರವಾಗುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಂತರಾಷ್ಟ್ರೀಯ ರೆಡ್‍ಕ್ರಾಸ್(ಐಸಿಆರ್‍ಸಿ)ಗೆ ಮನವಿ ಮಾಡಿರುವುದಾಗಿ ವರದಿಯಾಗಿದೆ.

ಗಾಝಾದಲ್ಲಿರುವ ಇಸ್ರೇಲಿ ಒತ್ತೆಯಾಳುಗಳಿಗೆ ಆಹಾರ ಮತ್ತು ತಕ್ಷಣ ವೈದ್ಯಕೀಯ ಚಿಕಿತ್ಸೆ ಒದಗಿಸಲು ಇಸ್ರೇಲ್ ಪ್ರಧಾನಿ ನೆರವು ಕೋರಿದ್ದಾರೆ ಎಂದು ಗಾಝಾ ಪ್ರದೇಶಕ್ಕೆ ಐಸಿಆರ್‍ಸಿ ಸಂಯೋಜಕ ಜೂಲಿಯನ್ ಲೆರಿಸನ್ ಹೇಳಿದ್ದು ಒತ್ತೆಯಾಳುಗಳನ್ನು ಸಂಪರ್ಕಿಸಲು ಅವಕಾಶ ನೀಡುವಂತೆ ಆಗ್ರಹಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಇಸ್ರೇಲಿ ಒತ್ತೆಯಾಳುಗಳಿಗೆ ಆಹಾರ ಮತ್ತು ಔಷಧಿ ಒದಗಿಸುವ ರೆಡ್‍ಕ್ರಾಸ್‌ ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ನಾವು ಸಿದ್ಧ. ಆದರೆ ಗಾಝಾ ಪಟ್ಟಿಯಾದ್ಯಂತ ಮಾನವೀಯ ನೆರವು ಪೂರೈಕೆಗೆ ಮಾನವೀಯ ಕಾರಿಡಾರ್ ತೆರೆಯಬೇಕೆಂಬ ನಮ್ಮ ಷರತ್ತನ್ನು ಪೂರೈಸಬೇಕು ಎಂದು ಹಮಾಸ್ ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News