"ಖತರ್ ಹಮಾಸ್ ಗೆ ಹಣಕಾಸು ನೆರವು ನೀಡುತ್ತಿದೆ": ದೋಹಾ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಇಸ್ರೇಲ್ ಪ್ರಧಾನಿ
Update: 2025-09-17 13:10 IST
ಬೆಂಜಮಿನ್ ನೆತನ್ಯಾಹು (File Photo: PTI)
ಜೆರುಸಲೇಂ: ಖತರ್ ಮೇಲಿನ ಇಸ್ರೇಲ್ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದು, ಖತರ್ ಹಮಾಸ್ ಗೆ ಹಣಕಾಸು ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
"ಖತರ್ ಹಮಾಸ್‌ನೊಂದಿಗೆ ಸಂಪರ್ಕ ಹೊಂದಿದೆ, ಹಮಾಸ್‌ಗೆ ಆಶ್ರಯ ಮತ್ತು ಹಣಕಾಸಿನ ನೆರವನ್ನು ನೀಡುತ್ತಿದೆ. ಆದ್ದರಿಂದ ನಮ್ಮ ಕ್ರಮವು ಸಂಪೂರ್ಣವಾಗಿ ಸಮರ್ಥನೀಯವಾಗಿದೆ ಎಂದು ನೆತನ್ಯಾಹು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ದೋಹಾ ಮೇಲೆ ನಡೆಸಿದ ಇಸ್ರೇಲ್ ದಾಳಿಯು ಖತರ್ ಮೇಲೆ ಇಸ್ರೇಲ್ ನಡೆಸಿದ ಮೊದಲ ದಾಳಿಯಾಗಿದೆ. ಬಾಂಬ್ ದಾಳಿಯಲ್ಲಿ ಆರು ಜನರು ಮೃತಪಟ್ಟಿದ್ದರು.
ಖತರ್ ಇಸ್ರೇಲ್ ಜೊತೆ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಿತ್ತು.