×
Ad

ಗಾಝಾ ನರಮೇಧ | ನ್ಯೂಯಾರ್ಕ್‌ನಲ್ಲಿ ಪ್ರತಿಭಟನೆ ಎದುರಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

Update: 2025-09-27 15:14 IST

Photo credit: X/@palyouthmvmt

ನ್ಯೂಯಾರ್ಕ್ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ನ್ಯೂಯಾರ್ಕ್ ಗೆ ತೆರಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಝಾದಲ್ಲಿ ನರಮೇಧವನ್ನು ಮುಂದುವರಿಸಿರುವ ಹಿನ್ನೆಲೆ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಜನರ ಪ್ರತಿಭಟನೆಯನ್ನು ಎದುರಿಸಿದರು.

ನೆತನ್ಯಾಹು ನ್ಯೂಯಾರ್ಕ್ ಭೇಟಿ ವೇಳೆ ಸಾವಿರಾರು ಜನರು ನ್ಯೂಯಾರ್ಕ್ ನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಫೆಲೆಸ್ತೀನ್ ಧ್ವಜವನ್ನು ಹಿಡಿದು ʼಫ್ರೀ ಫೆಲೆಸ್ತೀನ್ʼ ಮತ್ತು “ನೆತನ್ಯಾಹು ನೀವು ಮರೆಮಾಚಲು ಸಾಧ್ಯವಿಲ್ಲ, ನಾವು ನಿಮ್ಮ ಮೇಲೆ ನರಮೇಧದ ಆರೋಪ ಹೊರಿಸುತ್ತೇವೆ" ಎಂದು ಘೋಷಣೆಗಳನ್ನು ಕೂಗಿದರು.

ಇದಲ್ಲದೆ “ಗಾಝಾದ ಜನರ ಹಸಿವು ನಿಲ್ಲಿಸಿ”, “ಆಯುಧ ನಿರ್ಬಂಧ ಈಗಲೇ ಆರಂಭಿಸಿ” ಎಂಬ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ವಿಶ್ವಸಂಸ್ಥೆಯ ಭಾಷಣದಲ್ಲಿ ನೆತನ್ಯಾಹು ಪಾಶ್ಚಿಮಾತ್ಯ ದೇಶಗಳು ಫೆಲೆಸ್ತೀನ್ ರಾಷ್ಟ್ರಕ್ಕೆ ಬೆಂಬಲ ನೀಡುವುದನ್ನು ಟೀಕಿಸಿದರು. ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುತ್ತಿದ್ದಂತೆ ಹಲವಾರು ದೇಶಗಳ ಪ್ರತಿನಿಧಿಗಳು ಸಭಾಂಗಣದಿಂದ ಹೊರ ನಡೆದಿದ್ದರು.

ಗಾಝಾದಲ್ಲಿ ಹಸಿವಿನಿಂದ ಬಳಲುತ್ತಿರುವ ಫೆಲೆಸ್ತೀನ್‌ ಜನರ ಚಿತ್ರಣ ಜಗತ್ತಿನ ಕಣ್ತೆರೆಸಿದೆ. ಇಸ್ರೇಲ್ ದಾಳಿಯಿಂದ ಸಾವಿರಾರು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News