×
Ad

ಆಕ್ಸ್‌ಫರ್ಡ್ ವಿವಿ ಕುಲಪತಿ ಹುದ್ದೆಯ ರೇಸ್‍ನಿಂದ ಇಮ್ರಾನ್‍ಖಾನ್ ಹೊರಕ್ಕೆ

Update: 2024-10-16 22:54 IST

PC : PTI

ಲಂಡನ್ : ಬ್ರಿಟನ್‍ನ ಆಕ್ಸ್‌ಫರ್ಡ್ ವಿವಿಯ ನೂತನ ಕುಲಪತಿಯ ಆಯ್ಕೆಯ ರೇಸ್‍ ನಲ್ಲಿರುವ 38 ಫೈನಲಿಸ್ಟ್ ಗಳ ಪಟ್ಟಿಯನ್ನು ಬುಧವಾರ ಘೋಷಿಸಲಾಗಿದ್ದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದ್ದು ಭಾರತದ ಅಂಕುರ್ ಶಿವ್ ಭಂಡಾರಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕುಲಪತಿ ಹುದ್ದೆಗೆ ಆಯ್ಕೆ ಬಯಸಿ ವಿಶ್ವದಾದ್ಯಂತ ಅರ್ಜಿಗಳು ಬಂದಿದ್ದವು. ಚುನಾವಣಾ ಸಮಿತಿಯು ಆಯ್ಕೆ ಪ್ರಕ್ರಿಯೆ ನಡೆಸಿದ್ದು ಇಮ್ರಾನ್‍ಖಾನ್ ಅನರ್ಹಗೊಂಡಿದ್ದಾರೆ. ಬರ್ಕ್‍ಶೈರ್‍ ನ ಬ್ರಾಕ್‍ನೆಲ್ ನಗರದ ಮೇಯರ್ ಅಂಕುರ್ ಶಿವ್ ಭಂಡಾರಿ, ಪ್ರೊಫೆಸರ್ ನಿರ್ಪಾಲ್ ಸಿಂಗ್ ಪೌಲ್ ಭಂಗಾ, ಮತ್ತು ವೈದ್ಯಕೀಯ ವೃತ್ತಿಯ ಪ್ರತೀಕ್ ತರ್ವಾಡಿ ಸೇರಿದಂತೆ ಒಟ್ಟು 38 ಸಾಧಕರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News