×
Ad

ನೈಜೀರಿಯಾ: 25 ಶಾಲಾ ಬಾಲಕಿಯರ ಅಪಹರಣ

Update: 2025-11-18 22:33 IST

Photo Credit : AP \ PTI 

ಅಬುಜಾ, ನ.18: ವಾಯವ್ಯ ನೈಜೀರಿಯಾದ ಕೆಬ್ಬಿ ರಾಜ್ಯದ ಪ್ರೌಢಶಾಲೆಯ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ ದುಷ್ಕರ್ಮಿಗಳ ತಂಡವು ಶಾಲೆಯ ಉಪಪ್ರಾಂಶುಪಾಲರನ್ನು ಹತ್ಯೆ ಮಾಡಿ 25 ವಿದ್ಯಾರ್ಥಿನಿಯರನ್ನು ಅಪಹರಿಸಿರುವುದಾಗಿ ವರದಿಯಾಗಿದೆ.

ಮಾಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಘಟನೆ ಸಂಭವಿಸಿದ್ದು ಶಾಲೆಯ ಆವರಣಕ್ಕೆ ಕ್ರಿಮಿನಲ್‍ಗಳು ನುಗ್ಗಿರುವ ಮಾಹಿತಿ ದೊರೆತೊಡನೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ದುಷ್ಕರ್ಮಿಗಳು 25 ವಿದ್ಯಾರ್ಥಿನಿಯರನ್ನು ಅಪಹರಿಸಿ ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಸೇನೆಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು 4 ವರ್ಷಗಳ ಹಿಂದೆ ಕೆಬ್ಬಿ ನಗರದ ಸರಕಾರಿ ಕಾಲೇಜೊಂದರ 100ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ದುಷ್ಕರ್ಮಿಗಳ ಗ್ಯಾಂಗ್ ಅಪಹರಿಸಿತ್ತು. ಪೋಷಕರು ಹಣ ಪಾವತಿಸಿದ ಬಳಿಕ ಎರಡು ವರ್ಷಗಳಲ್ಲಿ ಹಂತಹಂತವಾಗಿ ಬಿಡುಗಡೆಗೊಳಿಸಲಾಗಿತ್ತು. ಇವರಲ್ಲಿ ಕೆಲವು ವಿದ್ಯಾರ್ಥಿನಿಯರನ್ನು ಬಲವಂತವಾಗಿ ಮದುವೆ ಮಾಡಿಸಲಾಗಿದ್ದು ಮಗುವಿನ ಜೊತೆ ವಾಪಸಾಗಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News