ಪುಟಿನ್ ಚೆನ್ನಾಗಿ ಮಾತನಾಡುತ್ತಾರೆ, ಬಳಿಕ ಬಾಂಬ್ ಹಾಕುತ್ತಾರೆ: ಡೊನಾಲ್ಡ್ ಟ್ರಂಪ್
PHOTO | PTI
ವಾಷಿಂಗ್ಟನ್, ಜು.14: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‍ರನ್ನು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕವು ಶೀಘ್ರವೇ ಉಕ್ರೇನ್ ಗೆ ಪ್ಯಾಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ರವಾನಿಸಲಿದೆ ಎಂದಿದ್ದಾರೆ.
ಪುಟಿನ್ ನಿಜಕ್ಕೂ ಹಲವಾರು ಜನರನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ. ಅವರು ಚೆನ್ನಾಗಿ ಮಾತನಾಡುತ್ತಾರೆ. ಆದರೆ ರಾತ್ರಿ ಬಾಂಬ್ ದಾಳಿ ನಡೆಸುತ್ತಾರೆ. ಅಲ್ಲಿ ಸ್ವಲ್ಪ ಸಮಸ್ಯೆಯಿದೆ ಮತ್ತು ಇದು ನನಗೆ ಇಷ್ಟವಾಗುವುದಿಲ್ಲ. ಉಕ್ರೇನ್ ವಿರುದ್ಧದ ಬಾಂಬ್ ದಾಳಿಯನ್ನು ಅವರು ತೀವ್ರಗೊಳಿಸಿದ್ದಾರೆ. ಈಗ ನಾವು ಉಕ್ರೇನ್‍ಗೆ ಪ್ಯಾಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸುತ್ತಿದ್ದು ಅದರ ವೆಚ್ಚವನ್ನು ನೇಟೊ ಭರಿಸುತ್ತದೆ. ಎಷ್ಟು ಪ್ಯಾಟ್ರಿಯಾಟ್ ವಾಯುರಕ್ಷಣಾ ವ್ಯವಸ್ಥೆಗಳನ್ನು ಕಳುಹಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ನೇಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರ್ಯೂಟ್‍ರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸುತ್ತೇನೆ' ಎಂದು ಟ್ರಂಪ್ ಹೇಳಿದ್ದಾರೆ.