×
Ad

ಭಾರತಕ್ಕೆ ಹಿಂದಿರುಗಿ: ಕೆನಡಾ ಸಂಸದ ಆರ್ಯಗೆ ಪನ್ನೂನ್ ಎಚ್ಚರಿಕೆ

Update: 2024-07-24 22:00 IST

ಚಂದ್ರ ಆರ್ಯ | PC : PTI  

ಒಟ್ಟಾವ : ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಮತ್ತು ಅವರ ಬೆಂಬಲಿಗರು ತಕ್ಷಣವೇ ಭಾರತಕ್ಕೆ ಹಿಂತಿರುಗಬೇಕೆಂದು ಸೂಚಿಸುವ ವೀಡಿಯೊ ಸಂದೇಶವನ್ನು ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಬಿಡುಗಡೆಗೊಳಿಸಿದ್ದಾರೆ.

ಅಲ್ಲದೆ, ಕೆನಡಾದ ಕ್ಯಾಲ್ಗರಿಯಲ್ಲಿ ಜುಲೈ 28ರಂದು ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ ಎಂದೂ ಪನ್ನೂನ್ ಹೇಳಿದ್ದಾನೆ. ಈ ಕುರಿತ ವೀಡಿಯೊವನ್ನು ಚಂದ್ರ ಆರ್ಯ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ` ಸಂಸದ ಚಂದ್ರ ಆರ್ಯ ಮತ್ತು ಅವರ ಬೆಂಬಲಿಗರು ಕೆನಡಾದ ಸಿದ್ಧಾಂತಗಳು ಮತ್ತು ಮೂಲಭೂತ ಹಕ್ಕುಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿನ ತನ್ನ ಒಡೆಯರ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದ್ದರಿಂದ ಇವರು ತಮ್ಮ ಪೌರತ್ವವನ್ನು ತಕ್ಷಣ ತ್ಯಜಿಸಿ ತಾಯ್ನಾಡು ಭಾರತಕ್ಕೆ ಹಿಂತಿರುಗಬೇಕು. ನಾವು ಖಾಲಿಸ್ತಾನ್ ಪರ ಸಿಖ್ ಆಗಿದ್ದು ದಶಕಗಳಿಂದ ಕೆನಡಾಕ್ಕೆ ನಮ್ಮ ನಿಷ್ಟೆಯನ್ನು ತೋರಿಸಿದ್ದೇವೆ' ಎಂದು ಪನ್ನೂನ್ ಹೇಳಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News