ಬ್ರಿಟನ್ | ರೋದರ್ ಹ್ಯಾಮ್ ನ ಮೇಯರ್ ಆಗಿ ರುಕ್ಸಾನಾ ಇಸ್ಮಾಯಿಲ್ ಅಧಿಕಾರ ಸ್ವೀಕಾರ
ರುಕ್ಸಾನಾ ಇಸ್ಮಾಯಿಲ್ | Photo: breakingnow.in
ರೋದರ್ ಹ್ಯಾಮ್ (ಯುಕೆ): ಬ್ರಿಟನ್ ನ ರೋದರ್ ಹ್ಯಾಮ್ ಸ್ಥಳೀಯ ಸಂಸ್ಥೆಯ ಮೇಯರ್ ಆಗಿ ರುಕ್ಸಾನಾ ಇಸ್ಮಾಯಿಲ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದು, ಅವರು 2025-26ನೇ ಸಾಲಿನವರೆಗೆ ಮೇಯರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ರೋದರ್ ಹ್ಯಾಮ್ ಸ್ಥಳೀಯ ಸಂಸ್ಥೆಯ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವ ಅವರು, 120ನೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಅವರ ಈ ನೇಮಕವು ಸಮುದಾಯದ ನಾಯಕತ್ವದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ.
ರುಕ್ಸಾನಾ ಇಸ್ಮಾಯಿಲ್ ಶೆಫೀಲ್ಡ್ ನಲ್ಲಿ ಜನಿಸಿದರೂ, ತಮ್ಮ ಬಾಲ್ಯದಲ್ಲೇ ಅವರು ಬರ್ಮಿಂಗ್ ಹ್ಯಾಮ್ ಗೆ ಸ್ಥಳಾಂತರಗೊಂಡಿದ್ದರು. ತಮ್ಮ ವಿವಾಹದ ನಂತರ ದಕ್ಷಿಣ ಯಾರ್ಕ್ ಶೈರ್ ಗೆ ಮರಳಿದ್ದ ಅವರು, 2010ರಿಂದ ತಮ್ಮ ಸಣ್ಣ ಕುಟುಂಬದೊಂದಿಗೆ ರೋದರ್ ಹ್ಯಾಮ್ ನಲ್ಲಿ ನೆಲೆಸಿದ್ದಾರೆ.
ರೋದರ್ ಹ್ಯಾಮ್ ನ ನೂತನ ಮೇಯರ್ ರುಕ್ಸಾನಾ ಇಸ್ಮಾಯಿಲ್, ತಮ್ಮ ಸಾಧನೆಯು ಕೇವಲ ತಮ್ಮ ಮಕ್ಕಳಿಗೆ ಮಾತ್ರ ಸ್ಫೂರ್ತಿಯಾಗಕೂಡದು, ಬದಲಿಗೆ ವಿಶಾಲವಾದ ಸಮುದಾಯಕ್ಕೂ ಪ್ರೇರಣೆಯಾಗಬೇಕು ಎಂಬ ಆಶಯ ಹೊಂದಿದ್ದಾರೆ. ಸಾರ್ವಜನಿಕ ಸೇವೆಯಲ್ಲಿನ ತಮ್ಮ ಈ ಸಾಧನೆಗೆ ಅತ್ಯುನ್ನತ ಮಾನದಂಡದ ನಿಗದಿ, ಸಕಾರಾತ್ಮಕ ಮನೋಭಾವ ಹಾಗೂ ನಾನು ಮಾಡಬಲ್ಲೆ ಎಂಬ ಧೋರಣೆ ಬುನಾದಿಯಾಯಿತು ಎಂದು ಅವರು ಹೇಳುತ್ತಾರೆ.