×
Ad

ವಿಶ್ವದ ಮೊದಲ AI ಆಧಾರಿತ ವೈರಾಣು ಸೃಷ್ಟಿಸಿದ ವಿಜ್ಞಾನಿಗಳು!

Update: 2025-09-29 21:19 IST

ಸಾಂದರ್ಭಿಕ ಚಿತ್ರ | Credit : freepik.com

ನ್ಯೂಯಾರ್ಕ್, ಸೆ.29: ಕೃತಕ ಬುದ್ಧಿಮತ್ತೆಯ(ಎಐ) ಸಹಾಯದಿಂದ ಸೃಷ್ಠಿಸಲಾದ ವಿಶ್ವದ ಮೊತ್ತ ಮೊದಲ ವೈರಾಣುವನ್ನು ಅಮೆರಿಕಾದ ಸ್ಟಾನ್‍ಫೋರ್ಡ್ ವಿವಿ ಮತ್ತು ಆರ್ಕ್ ಇನ್ಸಿಟ್ಯೂಟ್‍ನ ವಿಜ್ಞಾನಿಗಳು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ.

ಇ.ಕೊಲಿ(ಎಸ್ಕರೇಚಿಯಾ ಕೊಲಿ) ಎಂಬ ಆ್ಯಂಟಿಬಯೋಟಿಕ್(ಪ್ರತಿಜೀವಕ) ಪ್ರತಿರೋಧವನ್ನು ಕೊಲ್ಲುವ ಬ್ಯಾಕ್ಟೀರಿಯಾ ಭಕ್ಷಕ ವೈರಾಣು ಇದಾಗಿದೆ. ಫಲಿತಾಂಶಗಳು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಸಂಭಾವ್ಯ ಹೊಸ ಚಿಕಿತ್ಸೆಯನ್ನು ಸೂಚಿಸುತ್ತವೆ, ಜೀನ್ ಸಂವಹನ, ವಿಕಸನ ಮತ್ತು ನಿಯಂತ್ರಣದ ಬಗ್ಗೆ ಆಳವಾದ ತಿಳುವಳಿಕೆಯನ್ನು ಒದಗಿಸುತ್ತದೆ. ಜೊತೆಗೆ ದೊಡ್ಡ ಸಾಧ್ಯತೆಗಳನ್ನೂ ಸಹ ಹೆಚ್ಚಿಸುತ್ತದೆ. ಮುಂದಿನ ಹಂತವು ಎಐ ರಚಿತ ಜೀವದ ಸೃಷ್ಟಿ' ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಐ ಮಾದರಿಗಳನ್ನು ಈ ಹಿಂದೆ ಡಿಎನ್‍ಎ ಅನುಕ್ರಮಗಳು, ಏಕ ಪ್ರೊಟೀನ್‍ ಗಳು ಮತ್ತು ಬಹು ಘಟಕ ಸಂಕೀರ್ಣಗಳನ್ನು ಉತ್ಪಾದಿಸಲು ಬಳಸಲಾಗುತ್ತಿತ್ತು. ಮೊದಲ ಬಾರಿಗೆ ಎಐ ಪ್ರತ್ಯೇಕವಾದ ಪ್ರೊಟೀನ್‍ಗಳು ಅಥವಾ ಜೀವ ತುಣುಕುಗಳಿಗಿಂತ ಸಂಪೂರ್ಣ ಕ್ರಿಯಾತ್ಮಕ ಆನುವಂಶಿಕ ಮಾಹಿತಿಯನ್ನು ವಿನ್ಯಾಸಗೊಳಿಸುವ ಕ್ಷೇತ್ರಕ್ಕೆ ದಾಟಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News