×
Ad

ಸಿಂಗಾಪುರ: ಡ್ರಗ್ಸ್ ಕಳ್ಳಸಾಗಣೆ ಆರೋಪಿಗೆ ಗಲ್ಲು

Update: 2025-10-08 22:41 IST

ಸಾಂದರ್ಭಿಕ ಚಿತ್ರ | PC : freepik.com

ಕೌಲಾಲಂಪುರ,ಅ.8: ಸಿಂಗಾಪುರವು ಮಲೇಶ್ಯದ ಡ್ರಗ್ ಕಳ್ಳಸಾಗಣೆದಾರನೊಬ್ಬನನ್ನು ಬುಧವಾರ ಗಲ್ಲಿಗೇರಿಸಿದೆ. ಸಿಂಗಾಪುರದಲ್ಲಿ ಈ ವರ್ಷ ನಡೆದ ಹನ್ನೆರಡೇ ಗಲ್ಲುಶಿಕ್ಷೆ ಇದಾಗಿದೆ.

38 ವರ್ಷದ ಪನ್ನೀರ್ ಸೆಲ್ವಂ ಪ್ರಾಂಥಮಾನ್ ಅವರನ್ನು ಚಾಂಗಿ ಕಾರಾಗೃಹದಲ್ಲಿ ಗಲ್ಲಿಗೇರಿಸಿರುವುದನ್ನು ಸಿಂಗಾಪುರದ ಮರಣದಂಡನೆ ವಿರೋಧಿ ಹೋರಾಟಗಾರ ಕಿರ್ಸ್ಟೆನ್ ಹ್ಯಾನ್ ದೃಢಪಡಿಸಿದ್ದಾರೆ.

2014ರಲ್ಲಿ 52 ಗ್ರಾಂ. ಹೆರಾಯಿನ್ ಹೊಂದಿದ ಆರೋಪದಲ್ಲಿ ಪನ್ನೀರ್‌ ಗೆ ಸಿಂಗಾಪುರದ ನ್ಯಾಯಾಲಯವು ಗಲ್ಲು ಶಿಕ್ಷೆ ಘೋಷಿಸಿತ್ತು.

ತನಗೆ ಕ್ಷಮಾದಾನ ನೀಡುವಂತೆ ಕೋರಿ ಪನ್ನೀರ್ ಸೆಲ್ವಂ ರಾಷ್ಟ್ರಾಧ್ಯಕ್ಷರಿಗೆ ಸಲ್ಲಿಸಿದ ಅಂತಿಮ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ಬಳಿಕ ಆತನ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News