×
Ad

ಸಿಂಗಾಪುರ: ಭಾರತೀಯ ಮೂಲದ ಜೈಲು ವಾರ್ಡನ್ ಗೆ 83 ಲಕ್ಷ ರೂ. ದಂಡ

Update: 2023-11-21 22:27 IST

ಸಾಂದರ್ಭಿಕ ಚಿತ್ರ

ಸಿಂಗಾಪುರ: ಕೈದಿಯಿಂದ ಲಂಚ ಪಡೆದ ಪ್ರಕರಣದಲ್ಲಿ ಭಾರತೀಯ ಮೂಲದ ಜೈಲು ವಾರ್ಡನ್ ಗೆ ಸಿಂಗಾಪುರದ ನ್ಯಾಯಾಲಯ 83,02,930 ರೂ. ದಂಡ ವಿಧಿಸಿರುವುದಾಗಿ ವರದಿಯಾಗಿದೆ.

ಚಾಂಗ್ ಕೆಂಗ್ ಚ್ಯೆಯ್ ಎಂಬ ಕೈದಿ ತನ್ನನ್ನು ಜೈಲಿನ ಮತ್ತೊಂದು ಕೊಠಡಿಗೆ ವರ್ಗಾಯಿಸುವಂತೆ ಹಿರಿಯ ವಾರ್ಡನ್ ಕೋಬಿ ಕೃಷ್ಣ ಅಯಾವೂಗೆ ಕೋರಿಕೆ ಸಲ್ಲಿಸಿದ್ದು ಇದಕ್ಕೆ ಪ್ರತಿಯಾಗಿ ಲಂಚ ನೀಡುವಂತೆ ವಾರ್ಡನ್ ಸೂಚಿಸಿದ್ದರು. ಆದರೆ ಗುಪ್ತಚರ ಇಲಾಖೆಯ ಅಧಿಕಾರಿಯಾಗಿದ್ದ ತನ್ನ ಸ್ನೇಹಿತನ ಮೂಲಕ ಹಣ ಪಡೆದ ವಾರ್ಡನ್ , ಕೈದಿ ಚಾಂಗ್ ಕೆಂಗ್ನನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಲು ವಿಫಲವಾಗಿದ್ದರು ಎಂದು ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News