×
Ad

ಸುಡಾನ್: ಅತೀ ದೊಡ್ಡ ತೈಲ ಸಂಸ್ಕರಣಾಗಾರಕ್ಕೆ ಬೆಂಕಿ

Update: 2025-01-25 20:38 IST

PC : X 

ಖಾರ್ಟೂಮ್: ಸುಡಾನ್‌ ನ ಅತೀ ದೊಡ್ಡ ತೈಲ ಸಂಸ್ಕರಣಾಗಾರದ ಸುತ್ತಮುತ್ತ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಅತೀ ದೊಡ್ಡ ತೈಲ ಸಂಸ್ಕರಣಾಗಾರ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಉಪಗ್ರಹಗಳಿಂದ ಲಭಿಸಿದ ಚಿತ್ರಗಳು ದೃಢಪಡಿಸಿವೆ.

ಸುಡಾನ್ ಸರಕಾರ ಮತ್ತು ಚೀನಾ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಶನ್ ಸ್ವಾಮ್ಯದ `ದಿ ಅಲ್-ಜೈಲಿ ರಿಫೈನರಿ' ಪ್ರತೀ ದಿನ 1 ಲಕ್ಷ ಬ್ಯಾರೆಲ್‍ಗಳಷ್ಟು ತೈಲವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ರಾಜಧಾನಿ ಖಾರ್ಟೂಮ್‍ನಿಂದ ಸುಮಾರು 60 ಕಿ.ಮೀ ಉತ್ತರದಲ್ಲಿರುವ ತೈಲ ಸಂಸ್ಕರಣಾಗಾರವನ್ನು 2023ರ ಎಪ್ರಿಲ್‍ನಿಂದ ನಿಯಂತ್ರಿಸುತ್ತಿರುವುದಾಗಿ ಅರೆ ಸೇನಾಪಡೆ ಪ್ರತಿಪಾದಿಸುತ್ತಿದೆ. ತೈಲ ಸಂಸ್ಕರಣಾಗಾರದ ಸುತ್ತಲೂ ಅರೆಸೇನಾ ಪಡೆ ನೆಲಬಾಂಬ್‍ಗಳನ್ನು ಹುಗಿದಿಟ್ಟಿದ್ದು ಇದು ಸ್ಫೋಟಗೊಂಡು ಬೆಂಕಿ ಹರಡಿರುವ ಸಾಧ್ಯತೆಯಿದೆ ಎಂದು ಸುಡಾನ್ ಸೇನಾಪಡೆಯ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News