×
Ad

ಥೈಲ್ಯಾಂಡ್: ಪ್ರವಾಹದಲ್ಲಿ ಮೃತರ ಸಂಖ್ಯೆ 33ಕ್ಕೆ ಏರಿಕೆ

Update: 2025-11-26 21:34 IST

Photo Credit : AP \ PTI 

ಬ್ಯಾಂಕಾಕ್, ನ.26: ಥೈಲ್ಯಾಂಡ್‌ ನಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಲ್ಲಿ ಬಲಿಯಾದವರ ಸಂಖ್ಯೆ 33ಕ್ಕೇರಿದ್ದು ಈ ವಾರ ಇನ್ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಥೈಲ್ಯಾಂಡ್‌ ನ 9 ಪ್ರಾಂತಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಸುಮಾರು 45,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 27 ಲಕ್ಷಕ್ಕೂ ಹೆಚ್ಚು ಮಂದಿಗೆ ಸಮಸ್ಯೆಯಾಗಿದ್ದು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಆಹಾರ ಮತ್ತು ನೀರನ್ನು ಒದಗಿಸಲು ಆದ್ಯತೆ ನೀಡಲಾಗುತ್ತಿದೆ. ಹ್ಯಾತ್ ಯಾಯ್ ನಗರದಲ್ಲಿ ಸುಮಾರು 600 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆ ಜಲಾವೃತಗೊಂಡಿದ್ದು ತುರ್ತು ನೆರವು ಒದಗಿಸಲು ಮತ್ತು ತೀವ್ರ ನಿಗಾ ಘಟಕದಲ್ಲಿರುವ ಸುಮಾರು 50 ರೋಗಿಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಬಳಸಲಾಗುತ್ತಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕಾಗಿ 200 ದೋಣಿಗಳು ಹಾಗೂ 20 ಹೆಲಿಕಾಪ್ಟರ್‍ ಗಳನ್ನು ಹ್ಯಾತ್ ಯಾಯ್ ನಗರಕ್ಕೆ ರವಾನಿಸಲಾಗಿದೆ. ಈ ನಗರದಲ್ಲಿ ಕಳೆದ ವಾರ ಒಂದೇ ದಿನದಲ್ಲಿ 13 ಇಂಚಿನಷ್ಟು ಮಳೆ ಸುರಿದಿದೆ. ಎಂದು ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News