×
Ad

ಭ್ರಷ್ಟಾಚಾರ ಪ್ರಕರಣ | ನೆತನ್ಯಾಹುಗೆ ಕ್ಷಮಾದಾನ ನೀಡುವಂತೆ ಇಸ್ರೇಲ್ ಅಧ್ಯಕ್ಷರಿಗೆ ಟ್ರಂಪ್ ಕರೆ

Update: 2025-10-13 21:07 IST

ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು | Photo Credit ; PTI

ಟೆಲ್ ಅವೀವ್: ಭ್ರಷ್ಟಾಚಾರದ ಮೊಕದ್ದಮೆ ಎದುರಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕ್ಷಮಾದಾನ ನೀಡುವಂತೆ ತನ್ನ ಭಾಷಣದ ಸಂದರ್ಭ ಟ್ರಂಪ್ ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್‍ ಗೆ ಕರೆ ನೀಡಿದರು.

`ನೋಡಿ ಅಧ್ಯಕ್ಷರೇ, ನನಗೊಂದು ಆಲೋಚನೆಯಿದೆ. ನೀವ್ಯಾಕೆ ಅವರನ್ನು ಕ್ಷಮಿಸಬಾರದು ? ಕ್ಷಮಾದಾನ ನೀಡಿ ಬಿಡಿ.. ಆಗದೇ" ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.

ಲಂಚ, ವಂಚನೆ ಮತ್ತು ವಿಶ್ವಾಸದ ಉಲ್ಲಂಘನೆಗೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನೆತನ್ಯಾಹು ವಿಚಾರಣೆ ಎದುರಿಸುತ್ತಿದ್ದಾರೆ. ಎಲ್ಲಾ ಆರೋಪಗಳನ್ನೂ ನೆತನ್ಯಾಹು ನಿರಾಕರಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News