×
Ad

ಉಕ್ರೇನ್‍ನ ನೇಟೊ ಪ್ರವೇಶ ತಳ್ಳಿಹಾಕಿದ ಟ್ರಂಪ್

Update: 2025-08-19 22:35 IST

ಡೊನಾಲ್ಡ್ ಟ್ರಂಪ್ | PC : PTI

ವಾಷಿಂಗ್ಟನ್: ಉಕ್ರೇನ್ `ನೇಟೊ'ದ ಭಾಗವಾಗುವುದಿಲ್ಲ ಮತ್ತು ರಶ್ಯ ಹಾಗೂ ಯುರೋಪ್ ನಡುವೆ `ಬಫರ್' (ತಟಸ್ಥ) ಆಗಿ ಉಳಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಪುನರುಚ್ಚರಿಸಿದ್ದಾರೆ.

ಉಕ್ರೇನ್‍ಗೆ ಭದ್ರತಾ ಖಾತರಿ ದೊರೆಯಲಿದೆ. ಆದರೆ ಅದು `ನೇಟೊ' ಆಗಿರುವುದಿಲ್ಲ. ಅದು ಎಂದಿಗೂ ಸಂಭವಿಸಲು ಸಾಧ್ಯವಿಲ್ಲ. ರಶ್ಯದ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದೀರಿ ? ನಿಮ್ಮ ಗಡಿಯಲ್ಲೇ ಶತ್ರು ಇರುವುದನ್ನು ನೀವು ಬಯಸುವುದಿಲ್ಲ ಅಲ್ಲವೇ. ಆದ್ದರಿಂದಲೇ ಉಕ್ರೇನ್ ಯಾವತ್ತೂ ರಶ್ಯ ಮತ್ತು ಯುರೋಪ್ ನಡುವೆ ತಟಸ್ಥವಾಗಿ ಉಳಿಯಬೇಕು' ಎಂದು ಟ್ರಂಪ್ ಹೇಳಿದ್ದಾರೆ.

ಅಲ್ಲದೆ ಭದ್ರತಾ ಖಾತರಿಯ ಭಾಗವಾಗಿ ಉಕ್ರೇನ್‍ಗೆ ಅಮೆರಿಕದ ಪಡೆಗಳನ್ನು ಕಳುಹಿಸುವ ಸಾಧ್ಯತೆಯಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News