×
Ad

ಗಾಝಾ ನರಮೇಧ | ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿದ ತುರ್ಕಿಯೆ

Update: 2025-11-08 11:48 IST

ಅಂಕಾರಾ : ಗಾಝಾ ನರಮೇಧಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಸರಕಾರದ ಹಲವು ಹಿರಿಯ ಸಚಿವರ ವಿರುದ್ಧ ತುರ್ಕಿಯೆ ಬಂಧನ ವಾರಂಟ್ ಹೊರಡಿಸಿದೆ.

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್, ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್-ಗ್ವಿರ್ ಮತ್ತು ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಝಮೀರ್ ಸೇರಿದಂತೆ 37 ಇಸ್ರೇಲ್ ಅಧಿಕಾರಿಗಳ ಹೆಸರನ್ನು ವಾರಂಟ್‌ನಲ್ಲಿ ಹೆಸರಿಸಲಾಗಿದೆ ಎಂದು ಇಸ್ತಾನ್‌ಬುಲ್‌ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಇಸ್ರೇಲ್ ಅಕ್ಟೋಬರ್ 2023ರಿಂದ ಗಾಝಾದಲ್ಲಿ ವ್ಯವಸ್ಥಿತವಾಗಿ ಯುದ್ಧ ಕೃತ್ಯವನ್ನು ಎಸಗಿದೆ. ಇದು ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ತುರ್ಕಿಯೆ ಆರೋಪಿಸಿದೆ.

ಮಾರ್ಚ್‌ನಲ್ಲಿ ಗಾಝಾದಲ್ಲಿ ತುರ್ಕಿಯೆ-ಫೆಲೆಸ್ತೀನ್ ಸಹಯೋಗದ ಆಸ್ಪತ್ರೆಯ ಮೇಲೆ ಇಸ್ರೇಲ್‌ ನಡೆಸಿದ ದಾಳಿಯನ್ನು ಕೂಡ ಬಂಧನ ವಾರೆಂಟ್‌ ಹೊರಡಿಸುವ ವೇಳೆ ಪ್ರಾಸಿಕ್ಯೂಟರ್‌ಗಳು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News