×
Ad

ಉಕ್ರೇನ್: ರಶ್ಯದ ವೈಮಾನಿಕ ದಾಳಿಯಲ್ಲಿ 19 ಮಂದಿ ಮೃತ್ಯು

Update: 2025-11-19 22:21 IST

ಕೀವ್, ನ.19: ಮಂಗಳವಾರ ತಡರಾತ್ರಿಯಿಂದ ಉಕ್ರೇನನ್ನು ಗುರಿಯಾಗಿಸಿ ರಶ್ಯ 476 ಡ್ರೋನ್ ಗಳು ಹಾಗೂ 48 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು 87ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪಶ್ಚಿಮ ಉಕ್ರೇನ್ನ ಟರ್ನೋಪಿಲ್ನಲ್ಲಿ ಎರಡು ಬಹುಮಹಡಿ ಅಪಾರ್ಟ್ಮೆಂಟ್ ಗಳಿಗೆ ಹಾನಿಯಾಗಿದ್ದು 12 ಮಕ್ಕಳು ಸೇರಿದಂತೆ ಕನಿಷ್ಠ 37 ಮಂದಿ ಗಾಯಗೊಂಡಿದ್ದಾರೆ. ಖಾರ್ಕಿವ್ ಹಾಗೂ ಇತರ ಎರಡು ಪ್ರಾಂತಗಳಲ್ಲಿ ಕನಿಷ್ಠ 16 ಜನವಸತಿ ಕಟ್ಟಡಗಳಿ, ಆಂಬ್ಯುಲೆನ್ಸ್ ಕಟ್ಟಡ, ಶಾಲೆ ಹಾಗೂ ಇತರ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿಯಂತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News