×
Ad

ಮದ್ಯದ ಅಮಲಿನಲ್ಲಿ ವಿಮಾನದ ಕ್ಯಾಬಿನ್ ಸಿಬ್ಬಂದಿಗೆ ಕಚ್ಚಿದ ಪ್ರಯಾಣಿಕ

Update: 2024-01-17 23:42 IST

Photo: PTI

ಟೋಕಿಯೊ: ವಿಪರೀತ ಮದ್ಯಪಾನ ಮಾಡಿದ್ದ ಅಮೆರಿಕದ ಪ್ರಯಾಣಿಕನೊಬ್ಬ ವಿಮಾನದ ಕ್ಯಾಬಿನ್ ಸಿಬಂದಿಯನ್ನು ಕಚ್ಚಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಮರಳಿ ಜಪಾನ್‍ನ ಟೋಕಿಯೊ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ವರದಿಯಾಗಿದೆ.

155 ಪ್ರಯಾಣಿಕರಿದ್ದ ಆಲ್ ನಿಪ್ಪಾನ್ ಏರ್‍ವೇಸ್ ವಿಮಾನ ಅಮೆರಿಕದತ್ತ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ ವಿಪರೀತ ಮದ್ಯಪಾನ ಮಾಡಿದ್ದ ಅಮೆರಿಕದ ಪ್ರಜೆಯೊಬ್ಬ ವಿಮಾನದ ಸಿಬಂದಿಯ ಭುಜಕ್ಕೆ ಕಚ್ಚಿ ಗಾಯಗೊಳಿಸಿದಾಗ ವಿಮಾನವನ್ನು ಮತ್ತೆ ಟೋಕಿಯೊ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಸಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News