×
Ad

ರಸ್ತೆ ನಿರ್ಮಾಣ ಕಾರ್ಯ ಹಿನ್ನೆಲೆ : ಮಾ.12 ರಂದು ರಿಟ್ ಅರ್ಜಿ ಸಲ್ಲಿಸಿದ ಅರ್ಜಿದಾರರ ಅಹವಾಲು ಆಲಿಕೆ

Update: 2025-03-07 20:25 IST

ಕಲಬುರಗಿ : ಉಚ್ಚ ನ್ಯಾಯಾಲಯ ಕಲಬುರಗಿ ಪೀಠದ ರಿಟ್ ಅರ್ಜಿ ಸಂಖ್ಯೆ 200450/2025ರ ಫೆ.24ರಂದು ಜಾರಿ ಮಾಡಿದ ನಿರ್ದೇಶನದಂತೆ ರಸ್ತೆ ನಿರ್ಮಾಣ ಕಾಮಗಾರಿ ಕುರಿತು ಕಲಬುರಗಿ ಮಹಾನಗರಪಾಲಿಕೆಯ ವಲಯ ಕಚೇರಿ-1ರ ವಲಯ ಆಯುಕ್ತರು ಇದೇ ಮಾ.12 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಇಂದಿರಾ ಸ್ಮಾರಕ ಭವನ (ಟೌನ ಹಾಲ್)ನಲ್ಲಿ ರಿಟ್ ಅರ್ಜಿ ದಾಖಲಿಸಿದ ಅರ್ಜಿದಾರರ ದಾಖಲಾತಿ ಹಾಗೂ ಇತರೆ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಮಹಾನಗರಪಾಲಿಕೆ ವಲಯ ಕಚೇರಿ-1ರ ವಲಯ ಆಯುಕ್ತರು ತಿಳಿಸಿದ್ದಾರೆ.

ಬ್ರಹ್ಮಪೂರ ಸರ್ವೇ ನಂ. 77, 77 ಪಾರ್ಟ್, 77/1, 78/2/ಎ/3 ಮತ್ತು 78/2/ಎ2/ಬಿ2 ಮತ್ತು ಕೋಟನೂರ(ಡಿ) ಸರ್ವೆ ನಂ 15, 15 ಪಾರ್ಟ್, 15/3, 15/4, 5, 6, 7, 8 ಮತ್ತು 16/ಎ/1 ಗ್ರಾಮದ ಸಾಯಿಮಂದಿರ ರಸ್ತೆಯಿಂದ ಗಂಗಾವಿಹಾರ ಅಪಾರ್ಟ್‍ಮೆಂಟ್‍ವರೆಗೆ ಬಡಾವಣೆಗಳ ಸಾರ್ವಜನಿಕರು ಮೇಲ್ಕಂಡ ದಿನದಂದು ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News