ಜೇವರ್ಗಿ| ಮಾದಕ ವಸ್ತು ಮುಕ್ತವಾಗಿಸಲು ದೃಢ ಸಂಕಲ್ಪ : ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ
Update: 2025-11-01 21:22 IST
ಕಲಬುರಗಿ: ನಶಾಮುಕ್ತ ಭಾರತ ಯೋಜನೆಯ ಅಭಿಯಾನದಡಿಯಲ್ಲಿ ಜೇವರ್ಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಬುರಗಿ ಜಿಲ್ಲೆಯನ್ನು ಮಾದಕ ವಸ್ತು ಮುಕ್ತವಾಗಿಸಲು ದೃಢ ಸಂಕಲ್ಪ ಮಾಡಲು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥರು, ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ.ಖಾಜಾವಲಿ ಈಚನಾಳ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಂತಾ ಅಸ್ಟಿಗೆ, ರೆಡ್ ಕ್ರಾಸ್ ಸಂಸ್ಥೆಯ ರವೀಂದ್ರ ಶಹಾಬಾದಿ, ಜಿಮ್ಸ್ ಆಸ್ಪತ್ರೆಯ ಡಾ. ಜಗದೀಶ ಕಟ್ಟಿಮನಿ, ಡಾ.ಸೈಯದ್ ಸನಾವುಲ್ಲಾ, ಸಿಬ್ಬಂದಿ ಕಾರ್ಯದರ್ಶಿ ಡಾ.ಶರಣಪ್ಪ ಸೈದಾಪೂರ, ಐಕ್ಯೂಏಸಿ ಸಂಚಾಲಕ ಸಂದೀಪ್ ತಿವಾರಿ, ರೆಡ್ಕ್ರಾಸ್ ಸಂಚಾಲಕಿ ಡಾ. ಖುತೇಜಾ ನಸ್ರಿನ್, ಕನ್ನಡ ಅಧ್ಯಾಪಕ ಭೀಮಣ್ಣ ಇನ್ನಿತರ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.