×
Ad

ಕಲಬುರಗಿ: ಗಣತಿಯಲ್ಲಿನ ಲೋಪಗಳು ಸರಿಪಡಿಸಲು ಜಾಯಿಂಟ್ ಆಕ್ಷನ್ ಕಮಿಟಿ ಆಗ್ರಹ

ನೂತನ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅ.3ರ ʼಭಾರತ್ ಬಂದ್ʼ ಕರೆಗೆ ಬೆಂಬಲ

Update: 2025-09-28 23:14 IST

ಕಲಬುರಗಿ: ನೂತನ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಕ್ಟೋಬರ್ 3 ರಂದು ಬೆಳಿಗ್ಗೆ 8 ಯಿಂದ 2 ವರೆಗೆ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಕರೆ ನೀಡಿರುವ ಭಾರತ್ ಬಂದ್ ಗೆ ಕಲಬುರಗಿ ಜಂಟಿ ಆಕ್ಷನ್ ಕಮಿಟಿ ಬೆಂಬಲ ವ್ಯಕ್ತಪಡಿಸಿದ್ದೆ. ಅಲ್ಲದೇ ರಾಜ್ಯದಲ್ಲಿ ನಡೆಯುತ್ತಿರುವ ಗಣತಿ ಸಮೀಕ್ಷೆಯ ಲೋಪಗಳು ಸರಿಪಡಿಸಬೇಕೆಂದು ಕಮಿಟಿಯ ಅಧ್ಯಕ್ಷ ನ್ಯಾಯವಾದಿ ಜಬ್ಬಾರ್ ಗೋಲಾ ಒತ್ತಾಯಿಸಿದ್ದಾರೆ.

ನಗರದ ಹಯಾತ್ ಫಂಕ್ಷನ್ ಹಾಲನಲ್ಲಿ ನಡೆದ ಸಭೆಯಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಜಿಲ್ಲಾ ಸಂಚಾಲಕ ಡಾ. ಅಜಗರ್ ಚುಲಬುಲ್ ಮಾತನಾಡಿ ರಾಜ್ಯದಲ್ಲಿ ನಡೆಯುತ್ತಿರುವ ಗಣತಿಗೆ ಬರುವವರು ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಮಾಹಿತಿ ಮಾತ್ರ ದಾಖಲೆ ಮಾಡುತ್ತಿದ್ದಾರೆ. ರೇಷನ್ ಕಾರ್ಡ್ ನಲ್ಲಿ ಹೆಸರು ಇಲ್ಲದ ಸದಸ್ಯರು ಗಣತಿಯಿಂದ ಹೊರಗೆ ಉಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಅಲ್ಲದೇ ವಿದ್ಯುತ್ ಬಿಲ್ ಆರ್.ಆರ್ ಸಂಖ್ಯೆ ಜೊತೆ ಆಧಾರ ಜೋಡಣೆ ಇದವರೊಬ್ಬರನ್ನು ಗಣತಿ ಬಂದವರು ಮಾಹಿತಿ ಕೇಳುತ್ತಿದ್ದು, ರೇಷನ್ ಕಾರ್ಡ್ ಆರ್.ಆರ್ ಸಂಖ್ಯೆ ಹೊಂದಿರದ ಹೆಚ್ಚಿನ ಸಂಖ್ಯೆಯ ಜನರು ಈ ಗಣತಿಯಿಂದ ಹೊರೆಗೆ ಉಳಿಯುತ್ತಿದ್ದಾರೆ. ಇಂತಹ ಹಲವು ಲೋಪದೋಷಗಳು ನಡೆಸುತ್ತಿರುವ ಗಣತಿಯಲ್ಲಿ ಕಂಡುಬರುತ್ತಿದೆ. ತಕ್ಷಣಕ್ಕೆ ಇರುವ ಕೋಪವನ್ನು ಸರಿಪಡಿಸಿ ಒಂದು ಸಣ್ಣ ದಾಖಲೆ ಹೊಂದವರನ್ನು ಗಣತಿಗೆ ಒಳಪಡಿಸಿ ಮಾಹಿತಿ ‌ಪಡೆಯಬೇಕೆಂದು ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಜಂಟ್ ಆಕ್ಷನ್ ಕಮಿಟಿಯ ವೇಲ್ಫರ್ ಪಾರ್ಟಿಯ ಮುಖಂಡರು ಎಲ್ಲಾ ಸಮಸ್ಯೆಗಳ ನಿವಾರಣೆ ಮತ್ತು ಪರ್ಸನಲ್ ಲಾ ಬೋರ್ಡ್ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದರು.

ಈ ಸಂದರ್ಭದಲ್ಲಿ ಇಮ್ಲಿ ಮೊಹಲ್ಲಾದ ಸಜ್ಜಾದೆ ಸೈಯದ್ ಶಾ ಹಿದಾಯಾತ್ ಉಲ್ಲಾ ಖ್ರಾದ್ರಿ, ಅಫಜಲ್ ಮಹೆಮ್ಮುದ್, ಇಂಡಿಯಾ ಬೈತ್ ಉಲ್ ಮಾಲ್ ಅಧ್ಯಕ್ಷ ಇಕ್ಬಾಲ್ ಅಲಿ, ಮುಬೀನ್ ಅಹ್ಮದ್, ಅಲೀಮ್ ಚಿತ್ತಾಪುರಿ, ಪತ್ರಕರ್ತ ಮುಬೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News