ಕಲಬುರಗಿ | ವೈಜ್ಞಾನಿಕ ವೈಚಾರಿಕ ಹಿನ್ನಲೆ ಅರಿತು ಹಬ್ಬಗಳು ಆಚರಿಸುವುದು ಸೂಕ್ತ: ವೈಜಿನಾಥ ಎಂ.ಕೋಳಾರ
ಕಲಬುರಗಿ: ವೈಜ್ಞಾನಿಕ ಹಿನ್ನೆಲೆ ಅರಿತು ವೈಚಾರಿಕ ಮನೋಭಾವನೆಯಿಂದ ಹಬ್ಬಗಳನ್ನು ಆಚರಿಸುವುದು ಸೂಕ್ತ. ಹಬ್ಬದ ಹೆಸರಿನಲ್ಲಿ ಹುತ್ತಕ್ಕೆ ಹಾಲು ಎರೆಯುವುದು ತರವಲ್ಲ ಎಂದು ನಿವೃತ್ತ ಪ್ರಾಂಶುಪಾಲರಾದ ವೈಜಿನಾಥ ಎನ್.ಕೋಳಾರ ಅಭಿಪ್ರಾಯಪಟ್ಟರು.
ನಗರದ ಆದರ್ಶ ನಗರದ ಪದವಿಪೂರ್ವ ಕಾಲೇಜಿನಲ್ಲಿ ಬಸವ ಪಂಚಮಿ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಮಾನವ ಬಂಧುತ್ವ ವೇದಿಕೆ ಕಲಬುರಗಿ ಮತ್ತು ಸಂಸ್ಕಾರ ಪ್ರತಿಷ್ಠಾನ್ ಕಲಬುರಗಿ, ಜಾಗತಿಕ ಲಿಂಗಾಯತ ಮಹಾ ಸಭಾ, ಕಲಬುರಗಿ ಆರ್ಟ್ ಥಿಯೇಟರ್ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 'ಬಸವ ಪಂಚಮಿ' ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿದರು.
ದಯವೇ ಧರ್ಮದ ಮೂಲವಯ್ಯ ಆಗಬೇಕೆ ಹೊರತು ಭಯವೇ ಧರ್ಮದ ಮೂಲವಾಗಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ರಾಜು ಗಂಗಾಧರ್ ರವರು ವಹಿಸಿದ್ದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹಿರಿಯ ಉಪನ್ಯಾಸಕರಾದ ಜೆ.ಮಲ್ಲಪ್ಪ ಅವರು ಮಾತನಾಡಿ, ಬಸವ ಪಂಚಮಿ ಆಚರಣೆಯ ಉದ್ದೇಶವನ್ನು ತಿಳಿಸಿ, ಜನರ ಮನೆಗಳ ಸೂರುಗಳು ಗಟ್ಟಿಯಾಗಿ ಬೇಕೆ ಹೊರತು ಗುಡಿಗಳ ಗೋಪುರಗಳಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಶಿಕ್ಷಕಿ ಪ್ರತಿಭಾ ದೇವೂರ್, ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಸುನೀಲ ಮಾನಪಡೆ, ಸಂಸ್ಕಾರ ಪ್ರತಿಷ್ಠಾನ ಪ್ರತಿಷ್ಠಾನ ವಿಠ್ಠಲ ಚಿಕಣಿ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ, ಯುವ ಮುಖಂಡ ಮೈಲಾರಿ ದೊಡ್ಡಮನಿ, ಅನೀಲ ಮಂಗಾ, ಸಯೀದ್ ಅಬ್ದುಲ್ ಖಾದರ್, ಗಾಂಧಿ ಸುರಚಂದ್ರ, ಶಿವಕುಮಾರ ಯೇರಿಗೇರಿ, ಭಾರತಿ ಪಾಂಡೈ, ಲೀಲಾವತಿ ಪಡಶೆಟ್ಟಿ, ಜಗದೇವಿ, ಬನಶಂಕರಿ, ಜಯಶ್ರೀ ಪಾಟೀಲ್ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕನ್ನಡ ಉಪನ್ಯಾಸಕರಾದ ವಿಠ್ಠಲ ಬಾವಿಮಾನಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.