×
Ad

ಕಲಬುರಗಿ | ಕಅಬಾ ಮೇಲೆ ಭಗವಾಧ್ವಜ ಹಿಡಿದಿರುವ ಮೋದಿ, ಆದಿತ್ಯನಾಥ್ ಫೋಟೋ ಎಡಿಟ್‌ ಮಾಡಿ ವಿಕೃತಿ; ಯುವಕನ ಬಂಧನ

Update: 2025-10-05 13:40 IST

ಬಂಧಿತ ಆರೋಪಿ ಆನಂದ ಗುತ್ತೇದಾರ್(22)

ಕಲಬುರಗಿ : ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಮೆಕ್ಕಾದ ಕಅಬಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಭಗವಾಧ್ವಜವನ್ನು ಎಡಿಟ್ ಮಾಡಿದ ಫೊಟೋವೊಂದನ್ನು ವೈರಲ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ್(22) ಬಂಧಿತ ಆರೋಪಿಯಾಗಿದ್ದಾನೆ.

ಯುವಕ ಆನಂದ ಗುತ್ತೇದಾರ್, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಅಬಾದ ಮೇಲೆ ಭಗವಾಧ್ವಜ ಹಿಡಿದಿರುವ ನರೇಂದ್ರ ಮೋದಿ, ಆದಿತ್ಯನಾಥ್ ಫೋಟೋವನ್ನು ಎಡಿಟ್‌ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಗಮನಿಸಿದ ಜೇವರ್ಗಿ ತಾಲ್ಲೂಕಿನ ಟಿಪ್ಪುಸುಲ್ತಾನ್ ಸಮಿತಿ ಹಾಗೂ ಅದರ್ಶ ಗ್ರಾಮ ಸಮಿತಿ ಯಲವಾರ್ ಸಂಘಟನೆಗಳ ಮುಖಂಡರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿರುವ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಯುವಕನ ಹಿಂದೆ ಇರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ಅವರು ಆಗ್ರಹಿಸಿದ್ದಾರೆ.

ಟಿಪ್ಪು ಸುಲ್ತಾನ್ ಸಮಿತಿಯ ಅಧ್ಯಕ್ಷರಾದ ಮೊಹಿಯುದ್ದೀನ್ ಇನಾಂದಾರ್, ಇಬ್ರಾಹಿಂ ಪಟೇಲ್ ಯಲವಾರ್, ಸದ್ದಾಂ ಹುಸೇನ್, ನಿಸಾರ್ ಇನಾಂದಾರ್, ಸೈಯದ್ ನಾಸಿರ್ ಹಾಗೂ ಇಜೇರಿ ಮತ್ತು ಜೇವರ್ಗಿ ಪಟ್ಟಣದ ಯುವಕರು ಸೇರಿ, ಜೇವರ್ಗಿ ಪೊಲೀಸ್ ಠಾಣೆಗೆ ತೆರಳಿ, ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರ ರಾತ್ರಿ ಒತ್ತಾಯಿಸಿದ್ದರು.

ಸಯ್ಯದ್ ಪಟೇಲ್ ಎಂಬುವವರು ನೀಡಿದ ದೂರಿನ ಮೇರೆಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News