ಕಲಬುರಗಿ | ಆಳಂದ ಪುರಸಭೆ ಅಧ್ಯಕ್ಷರ ಸದಸ್ಯತ್ವ ರದ್ದು; ಆದೇಶ ತಡೆ ಕೋರಿ ಅರ್ಜಿ
Update: 2025-11-04 21:13 IST
ಕಲಬುರಗಿ: ಆಳಂದ ಪುರಸಭೆ ಅಧ್ಯಕ್ಷ ಫಿರ್ದೋಸ್ ಅರೀಫ್ ಅನ್ಸಾರಿ ಅವರ ಸದಸ್ಯತ್ವ ರದ್ದುಪಡಿಸಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಅ.31 ರಂದು ಆದೇಶ ಪ್ರಕಟಿಸಿರುವ ಜಿಲ್ಲಾಧಿಕಾರಿಯವರು, ಪುರಸಭೆ ಸಭೆಗಳಿಗೆ ಸತತವಾಗಿ ಗೈರು ಹಾಜರಾಗಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 16(2)(ಸಿ) ಉಲ್ಲಂಘನೆ ಮಾಡಿರುವುದರಿಂದ ಸದಸ್ಯ ಸ್ಥಾನವು ಸಾಮಾನ್ಯ ಅನರ್ಹತೆಯಿಂದ ಖಾಲಿಯಾಗಿರುತ್ತದೆ ಎಂದು ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಯಾವುದೇ ನೋಟಿಸ್ ಸಮನ್ಸ್ ನೀಡದೇ ಸದಸ್ಯತ್ವ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಆದೇಶ ತಡೆ ಕೋರಿ ಫಿರ್ದೋಸ್ ಅನ್ಸಾರಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.