×
Ad

ಕಲಬುರಗಿ | ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ಮಿತೆ ಬೆಳಗಿಸಿದವರು ಬಾನು ಮುಷ್ತಾಕ್ : ಕುಲಪತಿ ಪ್ರೊ.ಭಾಸ್ಕರ್

Update: 2025-06-04 21:41 IST

ಕಲಬುರಗಿ: ಧರ್ಮ, ಜಾತಿ, ಲಿಂಗ, ಸಮಾಜದಲ್ಲಿ ಹೆಣ್ಣಿನ ಕುಟುಂಬದ ಜವಾಬ್ದಾರಿ, ಒತ್ತಡಗಳನ್ನು ಮೀರಿದ ಹೆಣ್ಣಿನ ತಳಮಳ- ತಲ್ಲಣಗಳನ್ನು ಕಥರಗಳ ಮೂಲಕ ಹೆಣೆದು ಜಾಗತಿಕ ಮಟ್ಟದಲ್ಲಿ ಕನ್ನಡ ಅಸ್ಮಿತೆಯನ್ನು ಬೆಳಗಿದ ಕಥೆ ಗಾರ್ತಿ ಬಾನು ಮುಷ್ತಾಕ್ ಕಥೆಗಳಲ್ಲಿ ಕಾಣುವುದು ಮುಖ್ಯ ಆಶಯವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ..ಟಿ.ಎಂ.ಭಾಸ್ಕರ್ ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಮತ್ತು ಕನ್ನಡ ಅಧ್ಯಯನ ಸಂಶೋಧನ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಸಹ ಯೋಗದಲ್ಲಿ ಬೂಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಕಥಾ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸವನ್ನು ನೀಡುತ್ತ ಮಾತನಾಡಿದರು.

ಶರಣಬಸವ ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ.ಎಸ್.ಜಿ.ಡೋಳ್ಳೇಗೌಡರು ಮಾತನಾಡಿದರು. ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದನ್, ಅಕಾಡೆಮಿ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸುಮಂಗಲಾ ರೆಡ್ಡಿ ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ಸುರೇಶ ಬಡಿಗೇರ, ಶಾಂತಾ ಪಸ್ತಾಪೂರ, ಡಾ.ಸಾರಿಕಾದೇವಿ ಕಾಳಗಿ, ಡಾ.ಶೀಲಾದೇವಿ ಬಿರಾದಾರ, ಡಾ.ಸಿದ್ಧಪ್ಪ ಹೊಸಮನಿ, ಡಾ.ಚನ್ನಮ್ಮ, ಡಾ.ಪ್ರಭಾವತಿ ಚಿತ್ತ ಕೋಟ, ಡಾ.ರಾಜಕುಮಾರ ಮಾಳಗೆ, ಡಾ.ಧನರಾಜ ನೀಲಾ, ಡಾ.ನಾಗಪ್ಪ ಗೋಗಿ, ಜಯಶ್ರೀ ಚಿಂತಾಮಣಿ, ರೇಣುಕಾ ಎಸ್.ಎಚ್. ಕವನ ವಾಚಿಸಿದರು.

ಪ್ರಾರ್ಥನಾ ಗೀತೆ ವೈಷ್ಣವಿ ಅಹಂಕಾರಿ ಹಾಡಿದರು. ಚಕೋರ ವೇದಿಕೆ ಸಂಚಸಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು, ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ, ಡಾ.ಚನ್ನಮ್ಮ ಅಲ್ಬಾ ನಿರೂಪಿಸಿದರು. ಡಾ.ಕರೆಣ್ಣ ದೇವಾಪುರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News