ಕಲಬುರಗಿ | ಬಾರ್ ಸಿಬ್ಬಂದಿಯಿಂದ ಗ್ರಾಹಕರ ಮೇಲೆ ಹಲ್ಲೆ ಆರೋಪ; ಪ್ರಕರಣ ದಾಖಲು
Update: 2025-05-28 20:09 IST
ಕಲಬುರಗಿ : ಬಾರ್ ನಲ್ಲಿ ಊಟಕ್ಕೆಂದು ಬಂದ ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜೇವರ್ಗಿ ಪಟ್ಟಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೇ 24 ರಂದು ನಡೆದ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೇವರ್ಗಿ ಪಟ್ಟಣದ ದುರ್ಗಾ ಬಾರ್ & ರೆಸ್ಟೋರೆಂಟ್ ನಲ್ಲಿ ಬಾರ್ ಸಿಬ್ಬಂದಿಯು ವಿಶ್ವನಾಥ, ನಿಂಗಣ್ಣ ಹಾಗೂ ರವಿ ಎಂಬ ಗ್ರಾಹಕರ ಮೇಲೆ ಹಲ್ಲೆ ನಡೆದಿರುವುದು ತಿಳಿದುಬಂದಿದೆ.
ಹಲ್ಲೆಗೊಳಗಾದವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.