ಕಲಬುರಗಿ | ಹಡಗಿಲ ಹಾರುತಿ ಗ್ರಾಮದಲ್ಲಿ ಸಂವಿಧಾನ ದಿನ ಆಚರಣೆ
ಕಲಬುರಗಿ: ತಾಲ್ಲೂಕಿನ ಹಡಗಿಲ ಹಾರುತಿ ಗ್ರಾಮದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಚರಿಸಲಾಯಿತು.
ಶರಣ ಸಿರಸಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಅನಿಲ ಭರಣಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ಡಾ.ಅಂಬಾರಾಯ ಹಾಗರಗಿ ಅವರು ಸಂವಿಧಾನದ ರಚನೆ, ಮೂಲಭೂತ ಹಕ್ಕುಗಳ ಕುರಿತು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತ ವಿಕ್ರಮ ತೇಜಸ್ ಅವರು, ಸಂವಿಧಾನವು ಅಪಾಯದಲ್ಲಿದೆ ಅದನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ, ಆ ನಿಟ್ಟಿನಲ್ಲಿ ಸಂವಿಧಾನ ರಕ್ಷಣೆಗೆ ಯುವಕರು, ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದರಾಮ ನಡಗೇರಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಹೋರಾಟಗಾರ ವಿನೋದ ಸಿಂಧೆ ಎಲ್ಲರಿಗೂ ಸಂವಿಧಾನದ ಪೀಠಿಕೆ ಓದಿಸಿದರು.
ಕಾರ್ಯಕ್ರಮದಲ್ಲಿ ಲೋಚನ, ಅಂಬರೀಶ್, ಸಾಮಾಜಿಕ ಹೋರಾಟಗಾರರಾದ ರವಿ ಕೊಳಕರ್, ಶಿವನಾಥ, ಮಿಲಿಂದ ಸಾಗರ, ಪರಶುರಾಮ, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮದ ಮಹಿಳೆಯರು, ಯುವಕರು ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.