ಕಲಬುರಗಿ | ಎಚ್‍ಕೆಇಎಸ್ ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ವೈದ್ಯರ ದಿನಾಚರಣೆ
Update: 2025-07-01 22:05 IST
ಕಲಬುರಗಿ: ನಗರದ ಎಚ್‍ಕೆಇ ಸಂಸ್ಥೆಯ ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಡಾ.ಸುಧಾ ಆರ್.ಹಾಲಕಾಯಿ, ಸ್ವಾತಂತ್ರ್ಯ ಹೋರಾಟಗಾರ, ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ದಿವಂಗತ ಡಾ.ಬಿ.ಸಿ.ರಾಯ್ ಅವರ ಜನ್ಮದಿನದಂದು 1991 ರಿಂದ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಡಾ.ಬಿ. ಸಿ.ರಾಯ್ ಒಬ್ಬ ಪ್ರವರ್ತಕರಾಗಿದ್ದರು ಮತ್ತು ಅವರು ಎಐಎಂಎಸ್, ಎಂಸಿಐ ಮತ್ತು ಐಐಟಿ ಖಾನಕ್‍ಪುರ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಜಯಶ್ರೀ ಮುದ್ದಾ, ಡಾ.ವೀರೇಂದ್ರ ಪಾಟೀಲ, ಸೇರಿದಂತೆ ಎಲ್ಲಾ ಸಿಬ್ಬಂದಿಗಳು , ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳು, ಇಂಟರ್ನಿಗಳು ಉಪಸ್ಥಿತರಿದ್ದರು.