ಕಲಬುರಗಿ | ಮುಧೋಳ ವಸತಿ ಶಾಲೆಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ
Update: 2025-07-13 19:53 IST
ಕಲಬುರಗಿ: ಸೇಡಂ ತಾಲೂಕಿನ ಮುಧೋಳ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಗೆ ರವಿವಾರ ದಿಢೀರನೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮಕ್ಕಳೊಂದಿಗೆ ಕೆಲ ಕಾಲ ಸಮಾಲೋಚನೆ ನಡೆಸಿದರು.
ವಸತಿ ಶಾಲೆಯ ವ್ಯವಸ್ಥೆ ಹಾಗೂ ಬೋಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳಿದ ಸಚಿವರು, ದಿನನಿತ್ಯ ಬೆಳಿಗ್ಗೆ ದೈಹಿಕ ವ್ಯಾಯಾಮ ಜೊತೆಗೆ ದಿನಪತ್ರಿಕೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಹಿಡಿತ ಬಗ್ಗೆ ಪ್ರಶ್ನೆ ಕೇಳಿ, ತಾವು ತಿಳಿಸಿದ ಪದಗಳನ್ನು ಬೋರ್ಡ್ ಮೇಲೆ ಬರೆಯುವಂತೆ ಮಕ್ಕಳಿಗೆ ತಿಳಿಸಿ, ಕೆಲ ಸಮಯ ಮೇಷ್ಟ್ರಾಗಿ ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.