ಕಲಬುರಗಿ| ಭಾರೀ ಮಳೆ : ಚಿಂಚೋಳಿ ತಾಲ್ಲೂಕಿನಲ್ಲಿ ಹಲವು ಮನೆಗಳು ಜಲಾವೃತ
Update: 2025-08-11 20:27 IST
ಕಲಬುರಗಿ: ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಚಿಂಚೋಳಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ.
ಚಿಂಚೋಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಭಾರೀ ಮಳೆಯ ಪರಿಣಾಮ ಗ್ರಾಮದ ಹೊಸ ಬಡಾವಣೆಯ ಮನೆಗಳು ಜಲಾವೃತವಾಗಿದ್ದು, ಹಲವು ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ದವಸ- ಧಾನ್ಯಗಳು ಹಾಳಾಗಿವೆ.
ಕಳೆದ ಐದಾರು ವರ್ಷಗಳಿಂದ ಮಳೆ ಬಂದರೆ ಸಾಕು ಗ್ರಾಮದಲ್ಲಿರುವ ಜನರು ಆತಂಕದಲ್ಲಿ ಜೀವನ ಸಾಗಿಸುತ್ತಾರೆ. ಮನೆ ಹಾನಿ, ಬೆಳೆಹಾನಿ, ದಿನನಿತ್ಯ ಬಳಸುವ ವಸ್ತುಗಳು ಹಾನಿಯಿಂದ ಬೆಸತ್ತು ಹೋಗಿದ್ದಾರೆ. ಅಲ್ಲದೆ ಕಳೆದೆರಡು ವರ್ಷಗಳಿಂದ ಯಾವುದೇ ಪರಿಹಾರವು ನೀಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೇ ತಾಲ್ಲೂಕಿನ ಕರ್ಚಖೇಡ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮದಿಂದ ನಾಲ್ಕು ಕುರಿಗಳು ಸಹ ಮೃತಪಟ್ಟಿರುವ ಘಟನೆ ನಡೆದಿದೆ.