ಕಲಬುರಗಿ | ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾದ ಪತಿ
Update: 2025-05-02 15:54 IST
ಕಲಬುರಗಿ : ಅನೈತಿಕ ಸಂಬಂಧದ ಶಂಕೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾದ ಘಟನೆ ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಗ್ರಾಮದಲ್ಲಿ ನಡೆದಿದೆ.
ಸೃಷ್ಟಿ (22), ಖಾಜಪ್ಪ (23) ಕೊಲೆಯಾದವರು. ಸೃಷ್ಟಿ ಪತಿ ಶ್ರೀಮಂತ ಕೃತ್ಯವನ್ನು ಎಸಗಿದ್ದಾನೆ.
ಎರಡು ವರ್ಷಗಳ ಮೊದಲು ಸೃಷ್ಟಿ ಮತ್ತು ಶ್ರೀಮಂತ ಅವರ ವಿವಾಹ ನಡೆದಿತ್ತು. ಗುರುವಾರ ಊರಿಗೆ ಹೋಗಿದ್ದ ಶ್ರೀಮಂತ ಮನೆಗೆ ಬಂದಾಗ ಸೃಷ್ಟಿ ಮತ್ತು ಖಾಜಪ್ಪ ಜೊತೆಗಿರುವುದನ್ನು ನೋಡಿ ಇಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಆ ಬಳಿಕ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಈ ಕುರಿತು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.