ಕಲಬುರಗಿ | ಡೆತ್ ನೋಟ್ ಬರೆದಿಟ್ಟು ಗ್ರಂಥಪಾಲಕಿ ಆತ್ಮಹತ್ಯೆ
Update: 2025-10-13 22:13 IST
ಕಲಬುರಗಿ: ಕಳೆದ 3 ತಿಂಗಳನಿoದ ವೇತನ ನೀಡದಕ್ಕೆ ಮನನೊಂದು ಡೆತ್ ನೋಟ್ ಬರೆದಿಟ್ಟು ಗ್ರಂಥಪಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ.
ಭಾಗ್ಯವಂತಿ (40) ಆತ್ಮಹತ್ಯೆ ಮಾಡಿಕೊಂಡ ಗ್ರಂಥಪಾಲಕಿ ಎಂದು ತಿಳಿದು ಬಂದಿದೆ.
ಮಳಖೇಡ ಗ್ರಾಮ ಪಂಚಾಯತ್ ಆವರಣದಲ್ಲಿರುವ ಅರಿವು ಕೇಂದ್ರದಲ್ಲಿ ಭಾಗ್ಯವಂತಿ ಗ್ರಂಥಪಾಲಕಿಯಾಗಿ ಕೆಲಸ ಮಾಡುತ್ತಿದ್ದರು. ಕಳೆದ 3 ತಿಂಗಳನಿಂದ ಭಾಗ್ಯವಂತಿ ಅವರಿಗೆ ಸಂಬಳ ನೀಡಿರಲಿಲ್ಲ. ಹೀಗಾಗಿ ಡೆತ್ ನೋಟ್ ಬರೆದಿಟ್ಟು ಮಳಖೇಡ ಗ್ರಾಮ ಪಂಚಾಯತಿಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.