×
Ad

ಕಲಬುರಗಿ | ಸಮವಸ್ತ್ರದಲ್ಲೇ ಹೋಳಿ ಆಚರಿಸಿದ ಪೊಲೀಸರು : ವೀಡಿಯೊ ವೈರಲ್

Update: 2025-03-16 21:52 IST

ಕಲಬುರಗಿ : ಪೊಲೀಸರು ತಮ್ಮ ಸಮವಸ್ತ್ರದಲ್ಲಿಯೇ ಹೋಳಿ ಹಬ್ಬವನ್ನು ಆಚರಿಸಿದ ಘಟನೆ ಸೇಡಂ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ನಡೆದಿದೆ.

ಪೊಲೀಸರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೊಲೀಸರು ಖಾಕಿ ಬಟ್ಟೆ ಧರಿಸಿ ಸಮವಸ್ತ್ರದಲ್ಲಿಯೇ ಬಣ್ಣ ಎರಚಿಕೊಂಡು ನೃತ್ಯ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News