ಕಲಬುರಗಿ | ಎಂ.ಜಿ ರಸ್ತೆಯ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ಕಲಬುರಗಿ: ನಗರದ ವಾರ್ಡ್ ನಂ 30 ಮತ್ತು 32 ರ ಮದ್ಯ ಎಮ್.ಜಿ ರಸ್ತೆಯ ಹಾಳಾಗಿರುವುದರಿಂದ ಬಡಾವಣೆಯ ಮುಖಂಡರು ನಗರದ ವಾಜಪೇಯಿ ವೃತ್ತ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮಹಾತ್ಮಾ ಗಾಂಧಿ (ಎಂ.ಜಿ ರಸ್ತೆ) ಬಸವೇಶ್ವರ ಕಾಲೋನಿ ಮತ್ತು ಗುಬ್ಬಿ ಕಾಲೊನಿಯ ಮದ್ಯ ರಸ್ತೆ, ರಿಂಗ್ ರೋಡ್ ವರೆಗೆ ಹಾದು ಹೋಗುವ ರಸ್ತೆ ಹಾಳಾಗಿರುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ಹಾನಿಗಳಾಗಿದ್ದು, ಬಡಾವಣೆಯ ನಾಗರಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇದು ಎಲ್ ಆಂಡ್ ಟಿ ಕಾಮಗಾರಿಯಾಗಿದ್ದು, ಒಳರಸ್ತೆಗಳು ತುಂಬಾ ಹಾಳಾಗಿದೆ. ಅದನ್ನು ಕೂಡ ಆದಷ್ಟು ಬೇಗ ಸರಿಪಡಿಸಬೇಕು. ಕೂಡಲೆ ಎಂ.ಜಿ ರಸ್ತೆಯ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಬಡಾವಣೆಯ ಮುಖಂಡರು ಪಾಲಿಕೆ ಆಯುಕ್ತರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಗದೇವ ಎಂ.ಗುತ್ತೇದಾರ, ಸಿದ್ದರಾಜ ಬಿರಾದಾರ, ರಾಜು ಹೊಡಲ, ವಿಕಾಸ್ ಕರಣಿಕ್, ಸೂರ್ಯಕಾಂತ್ ಸಿರಗಾಪುರ, ಬಸವರಾಜ್ ಕೊರವಾರ್, ಶರಣು ದೋಣಿ, ಸಿದ್ದಪ್ಪ ಹುಳಿಪಲ್ಲ್ಯಾ, ಶ್ರೀಕಾಂತ್ ಚಿಂಚೋಳಿ, ಶಾಂತಗೌಡ, ಪವನ ಸ್ವಾಮಿ, ಸನ್ನಿ, ಪಾಂಡು, ಶಿವು, ವೀರೇಶ್ ಸೇರಿದಂತೆ ಇತರರು ಇದ್ದರು.