ಕಲಬುರಗಿ| ಹಿರಿಯ ಪತ್ರಕರ್ತ ಗೋವಿಂದರಾವ್ ಖಮಿತಕರ್ ನಿಧನ
Update: 2025-09-05 11:53 IST
ಕಲಬುರಗಿ: ಇಲ್ಲಿನ 'ವಾಣಿಸಾಮ್ರಾಟ' ಮತ್ತು 'ವೃತ್ತಮಂಜರಿ' ಪತ್ರಿಕೆಗಳ ಸಂಪಾದಕರಾದ ಗೋವಿಂದರಾವ್ ಖಮಿತಕರ್ (86) ಅವರು ವಯೋಸಹಜದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶುಕ್ರವಾರ ಮಧ್ಯಾಹ್ನ ನಗರದ ಚಿತ್ತಾರಿ ಅಡ್ಡಾದ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾಗಿದ್ದರು.
ಕಷ್ಟದ ಕಾಲದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಏಕೈಕ ಹಿಂದಿ ಪತ್ರಿಕೆಯನ್ನು ಆರಂಭಿಸಿ ನೀರಾವರಿ, ಶೈಕ್ಷಣಿಕ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಲೇಖನ ಬರೆಯುವ ಮೂಲಕ ಶ್ರಮಿಸಿದ್ದಾರೆ.