×
Ad

ಕಲಬುರಗಿ | ಸಿರತುನ ನಬಿ ಕಾಂಪಿಟಿಷನ್ ವೆಬ್‌ಸೈಟ್ ಗೆ ಚಾಲನೆ

Update: 2025-09-19 21:47 IST

ಕಲಬುರಗಿ : ನಗರದ ಖ್ವಾಜಾ ಬಂದೇ ನವಾಝ್ ದರ್ಗಾ ಕಚೇರಿಯಲ್ಲಿ ಪ್ರವಾದಿ ಪೈಗಂಬರ್ ಹುಟ್ಟುಹಬ್ಬದ ಅಂಗವಾಗಿ ಸಿರತುನ ನಬಿ ಸ್ಪರ್ಧೆಗಾಗಿ ಸಿದ್ಧಪಡಿಸಿದ ವೆಬ್‌ಸೈಟ್ ಹಾಗೂ ಕ್ಯೂಆರ್ ಕೋಡ್ ಅನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಹಜರತ್ ಸೈಯದ್ ಅಲಿ ಅಲ್ ಹುಸೈನಿ ಅವರು ಶುಕ್ರವಾರ ಉದ್ಘಾಟಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 7,000 ರೂ., ದ್ವಿತೀಯ ಬಹುಮಾನ 5,000 ರೂ. ಮತ್ತು ತೃತೀಯ ಬಹುಮಾನ 4,000 ರೂ. ನಿಗದಿಪಡಿಸಲಾಗಿದೆ. ಸ್ಪರ್ಧೆಗಳು ಅಕ್ಟೋಬರ್ 12ರವರೆಗೆ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಿರತುನ್ ನಬಿ ಸ್ಟಡಿ ಆಂಡ್ ರಿಸರ್ಚ್ ಸೆಂಟರ್ ಅಧ್ಯಕ್ಷ ಮುಹಮ್ಮದ್ ಅಜಗರ್ ಚೂಲ್ ಬುಲ್ಲ, ಡಾ. ಮುಸ್ತಫ ಅಲಿ ಹುಸೇನ್, ಆಕಿಬ್ ಆರ್. ಹುಸೇನ್, ಮೌಲಾನ ಅಶ್ರಫ್, ಆದಿಲ್ ಸುಲೇಮಾನ್, ಸೇಟ್ ಸೇರ್ ಉಲೇಮ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News